ಹಾಸನದಲ್ಲಿ ಮೆಕ್ಯಾನಿಕ್ Murder : ಬಳಿಕ ಶವದೊಂದಿಗೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕರು.

ಹಾಸನದಲ್ಲಿ ಇತ್ತೀಚಿನ ದಿನಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ ಅನ್ನೋ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಗಾಂಜಾ ಅಮಲಿನಲ್ಲಿ ಭೀಕರ ಹತ್ಯೆಯೊಂದು ನಡೆದಿದ್ದು, ಇಡೀ ಹಾಸನ ಜಿಲ್ಲೆ ಬೆಚ್ಚಿಬಿದ್ದಿದೆ. ಹಾಸನ ನಗರದಲ್ಲಿ ಗಾಂಜಾ ಅಮಲಿನಲ್ಲಿದ್ದ ಯುವಕನೋರ್ವ ತನ್ನ ಜೊತೆಗಿದ್ದ ಮತ್ತೋರ್ವ ಯುವಕನನ್ನು Murder ಮಾಡಿದ್ದಾನೆ.
ಬರ್ಬರ ಕೊಲೆ
ಹಾಸನ ನಗರದ ಬಿಟ್ಟಗೌಡನಹಳ್ಳಿ ವ್ಯಾಪ್ತಿಯಲ್ಲಿ ಗಾಂಜಾ ಮತ್ತಲ್ಲಿ ಕಿರಾತಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವದ ಮುಂದೆ Selfie Video ಮಾಡಿ ಹಂತಕರು ವಿಕೃತಿ ಮೆರೆದಿದ್ದಾರೆ. ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಕೀರ್ತಿ ಹತ್ಯೆಯಾದ ಯುವಕನಾಗಿದ್ದಾನೆ.
ಮೃತ ಯುವಕ ಕೀರ್ತಿ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಾ ಇದ್ದ ಎನ್ನಲಾಗಿದೆ. ಅಲ್ದೇ ಹಂತಕರು ಕೊಲೆ ಮಾಡಿದ್ದಲ್ಲದೇ ಹಂತಕರು ಶವದ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಸದ್ಯ Video Viral ಆಗಿದ್ದು ಹಾಸನ ಜನರು ಬೆಚ್ಚಿಬಿದ್ದಿದ್ದಾರೆ.
ಶವದ ಮುಂದೆ ವಿಡಿಯೋ ಮಾಡಿ ಕ್ರೌರ್ಯ..!
ಹತ್ಯೆಯಾದ ಕೀರ್ತಿ ವೃತ್ತಿಯಲ್ಲಿ ಮೆಕ್ಯಾನಿಕಲ್ ಆಗಿ ಕೆಲಸ ಮಾಡಿಕೊಂಡು ಇದ್ದು, ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಇದ್ದ. ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡುತ್ತಾ ಇದ್ದ. ಆದ್ರೆ ನಿನ್ನೆ ಗಾಂಜಾ ಮತ್ತಲ್ಲಿ ಕೀರ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹಂತಕರು ಹತ್ಯೆ ಕ್ರೌರ್ಯತೆ ಮೆರೆದಿದ್ದಾರೆ. Murder ಮಾಡಿದ್ದು ಅಲ್ಲದೇ ಮನುಷ್ಯತ್ವ ಮೆರೆದ ಕ್ರೂರಿಯೊಬ್ಬನನ್ನು ನಾವು ಹೊಡೆದಿದ್ದೇವೆ ಎಂದು ಸೆಲ್ಫಿ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನು ವಿಡಿಯೋದಲ್ಲಿ ನಾವು ಹೊಡೆದಿದ್ದೇವೆ, ನಾವು ಸಾಯಿಸಿದ್ದೇವೆ ಎಂದು ಗಾಂಜಾ ಮತ್ತಲ್ಲಿ ವಿಕೃತನೊಬ್ಬ ಆನಂದಪಟ್ಟಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಹೇಯ್ ನಿಂತ್ಕೋಳ್ರೊ ನಾವು ದೊಡ್ಡದಾಗಿ ಬೆಳೆದು, ನಾವು ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನು ಸಂಭ್ರಮಿಸಿ, ಅಟ್ಟಹಾಸ ಮೆರೆದಿದ್ದಾರೆ.
ಇದನ್ನು ಓದಿ : ಟೆಂಪೋ ಟೈಯರ್ ಬ್ಲ್ಯಾಸ್ಟ್ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಒಟ್ಟಿಗೆ ಪಾರ್ಟಿ
ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಉಲ್ಲಾಸ್ ಹಾಗು ಕೀರ್ತಿ ಎಲ್ಲರೂ ಪರಿಚಿತರಾಗಿದ್ದು, ನಿನ್ನೆ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ.
ಆದ್ರೆ ಬಳಿಕ ಏನಾಯ್ತೋ ಏನೋ ಜೊತೆಗೆ ಬಂಧವನನ್ನ ಬಡಿದು ಕೊಂದು ಶವದ ಎದುರು ವೀಡಿಯೋ ಮಾಡಿದ್ದಾರೆ. ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ ಉಲ್ಲಾಸ್ ಒಂದು ವೀಡಿಯೋದಲ್ಲಿ ತಾನೊಬ್ಬನೇ ಇದ್ದರೆ ಇನ್ನೊಂದು ವೀಡಿಯೋದಲ್ಲಿ ಮತ್ತಿಬ್ಬರು ಇರೋದನ್ನ ತೋರಿಸಿದ್ದಾನೆ.
ಹಂತಕರ ಬಂಧನಕ್ಕೆ ಬಲೆ
ಇನ್ನು ಎಷ್ಟು ಹೊತ್ತಾದ್ರು ಮನೆಗೆ ಬಾರದಿದ್ದಕ್ಕೆ ಆತಂಕಗೊಂಡಿದ್ದ ಮನೆಯವರರಿಗೆ ಬೆಳಗ್ಗೆ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಅಲ್ದೇ ವಿಡಿಯೋ ಜಾಡು ಹಿಡಿದು ಹೊರಟ ಪೊಲೀಸರು ತನಿಖೆಗೆ ಇಳಿದಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಅಧಿಕಾರಿಗಳಿಂದ ಇದೆಂಥಾ ದಬ್ಬಾಳಿಕೆ – ನೆಂಟರ ಮನೆಗೆ ಹುಡುಕಿಕೊಂಡು ಹೋಗಿ ARREST ಮಾಡಿದ್ರು




