ರಾಯಚೂರಿನಲ್ಲಿ ಭೀಕರ Bus Accident – 20 ಪ್ರಯಾಣಿಕರಿಗೆ ಗಂಭೀರ ಗಾಯ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಂಚೇಸುಗೂರು ಬಳಿ ಇಂದು ಬೆಳಗ್ಗೆ ಭೀಕರ Bus Accident ನಡೆದಿದೆ. ಅಂಜುಳ ಗ್ರಾಮದಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆನಾಲ್ ಸೇತುವೆ ದಾಟುವಾಗ ಪಲ್ಟಿಯಾಗಿ ಬಿದ್ದಿದೆ.
ಬಸ್ ಕಂಡಕ್ಟರ್ ದಾರುಣವಾಗಿ ಸಾವು
ಇನ್ನು ಈ ಅಪಘಾತದಲ್ಲಿ ಬಸ್ ಕಂಡಕ್ಟರ್ ಬಸವರಾಜ ಸ್ಥಳದಲ್ಲೇ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ರೈತರು ತಕ್ಷಣ ರಕ್ಷಣೆ ಮಾಡಿ ಟಂಟಂ, ಟ್ರಾಕ್ಟರ್, ಆಟೋ ಮತ್ತು ಬೈಕ್ಗಳ ಮೂಲಕ ದೇವದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನು ಓದಿ : ಆ್ಯಶಸ್ ಸರಣಿಯಿಂದ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಔಟ್
ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು 50 ವರ್ಷ ಮೇಲ್ಪಟ್ಟವರು. ಕೈ-ಕಾಲು ಮುರಿದುಕೊಂಡವರು, ತಲೆಗೆ ಗಾಯವಾದವರು, ಬೆನ್ನು ನೋವು ಇರುವವರು ಹೀಗೆ ಗಾಯದ ತೀವ್ರತೆ ವಿಭಿನ್ನವಾಗಿದೆ.
Bus Accident ಗೆ ನಿಯಂತ್ರಣ ತಪ್ಪಿದ್ದೇ ಕಾರಣ?
ಇನ್ನು ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್ ಚಾಲಕನಿಗೆ ಆಯಾಸವೋ ಅಥವಾ ನಿದ್ರೆಯೋ ಬಂದಿರಬಹುದು ಎಂಬ ಶಂಕೆ ಇದೆ. ಸೇತುವೆಯ ಮೇಲೆಯೇ ಚಾಲಕನ ನಿಯಂತ್ರಣ ತಪ್ಪಿ ಬಸ್ ಎಡಭಾಗಕ್ಕೆ ಒರಗಿ ಕೆಳಗೆ ಬಿದ್ದಿದೆ. ದೇವದುರ್ಗ ಪೊಲೀಸರು ಸ್ಥಳಕ್ಕೆ ತೆರಳಿ ನಡೆಸಿ, ಬಸ್ ಎತ್ತಿಸಿದ್ದಾರೆ.
ಇದನ್ನು ನೋಡಿ : CM Letter|ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ! ಯಾಕೆ




