BBK 12 : ಗಿಲ್ಲಿ ಹೃದಯಕ್ಕೆ ಮತ್ತೆ ಚುಚ್ಚಿದ ಕಾವ್ಯ.. ಅಚ್ಚರಿಯ ನಾಮಿನೇಷನ್ ಲಿಸ್ಟ್..!

ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ Gilli ನಾಮಿನೇಟ್ ಮಾಡಿ ಕಾವ್ಯ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಹೌಸ್ ‘ವಿಲನ್’ ಮನೆಯಾಗಿ ಬದಲಾದಾಗಿನಿಂದ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ.
ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ಕಾವು
ಕಾವ್ಯ ತಮ್ಮ ‘ಬೆಸ್ಟ್ ಫ್ರೆಂಡ್’ ಎಂದೇ ಕರೆಯುತ್ತಿದ್ದ ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದು ಮನೆಮಂದಿಗೆ ಶಾಕ್ ನೀಡಿದೆ. ಜೊತೆಗೆ ರಜತ್ ನಾಮಿನೇಷನ್ ಕೂಡ ಮನೆಯಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು.

ಧ್ರುವಂತ್ ಜೊತೆ ರಜತ್ ಭಾರೀ ವಾಗ್ವಾದ
ರಜತ್ ಮನೆಮಂದಿಯ ವರ್ತನೆಗೆ ಕೋಪಗೊಂಡು Gilli ಜೊತೆಗೆ ಅವರನ್ನು ನಾಮಿನೇಟ್ ಮಾಡಿದ ಕಾವ್ಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಧ್ರುವಂತ್ ಜೊತೆ ರಜತ್ ಭಾರೀ ವಾಗ್ವಾದ ನಡೆಸಿ, ಪರಿಸ್ಥಿತಿ ಹೊಡೆದಾಟಕ್ಕೆ ತಲುಪುವ ಮಟ್ಟಿಗೆ ಏರಿದೆ. ಇದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ Social Media ದಲ್ಲಿ ಬಿಡುಗಡೆ ಮಾಡಿದೆ.
ಬಿಗ್ ಬಾಸ್ ಮನೆ ಈಗ ‘ವಿಲನ್’ ಹಿಡಿತದಲ್ಲಿ
ವಿಲನ್ ಪ್ರವೇಶವಾದ ನಂತರ ಗೇಮ್ ಸಂಪೂರ್ಣವಾಗಿ ಬದಲಾಗಿದ್ದು, Nomination Rules ಸಹ ಹೊಸ ರೀತಿಯಲ್ಲಿ ಜಾರಿಯಾಗಿದೆ. ಈ ಹೊಸ ನಿಯಮಗಳ ನಡುವೆ ಕಾವ್ಯನ ನಾಮಿನೇಷನ್ ನಿರ್ಧಾರ ಮುಂದಿನ ಎಪಿಸೋಡ್ಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಇದನ್ನು ಓದಿ : Devil ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ?

ಗಿಲ್ಲಿಯಿಂದ ಕಾವ್ಯಗೆ Plus Point
ಗಿಲ್ಲಿ ಮತ್ತು ಕಾವ್ಯ ಮೊದಲ ವಾರದಿಂದಲೂ ಬಿಗ್ ಬಾಸ್ನಲ್ಲಿ ಆತ್ಮೀಯವಾಗಿದ್ದರು. ಇಬ್ಬರ ನಡುವಿನ ಮಾತುಕತೆಗಳು, ಕಿತ್ತಾಟ, ಜಗಳ, ಪರಸ್ಪರ ಕಾಲೆಳೆದುಕೊಳ್ಳುವ ರೀತಿ ಎಲ್ಲವೂ ವೀಕ್ಷಕರಿಗೆ ತುಂಬಾನೇ ಇಷ್ಟವಾಗುತ್ತಿತ್ತು.
ಹೀಗಿದ್ದೂ, ಕಾವ್ಯ ಮನೆಯಲ್ಲಿ ಇರಲು ಗಿಲ್ಲಿಯನ್ನು ಬಳಸಿಕೊಳ್ತಿದ್ದಾರೆ. Gilli ಯಿಂದ ಕಾವ್ಯಗೆ ಪ್ಲಸ್ ಆಗ್ತಿದೆ ಎಂಬೆಲ್ಲ ಚರ್ಚೆ ಜೋರಾಗಿದೆ. ಇದೇ ಕಾರಣಕ್ಕೆ ಕಾವ್ಯ ಅವರು, ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೀಗ ಗಿಲ್ಲಿ ಮೇಲೆ ಕಾವ್ಯ ಮಾಡುತ್ತಿರುವ ಮಸಲತ್ತು ಜೋರಾದಂತೆ ಇದೆ.

ಇದನ್ನು ನೋಡಿ : ಇಂಡಿಗೋ ಎಫೆಕ್ಟ್ – ಬೆಂಗ್ಳೂರಿನ ಪಂಚತಾರಾ ಹೋಟೆಲ್ಗಳ ದರ 40-60% ಏರಿಕೆ




