Chikkaballapura : ವೈದ್ಯರ ನಿರ್ಲಕ್ಷ್ಯ ಆರೋಪ.. ಬಾಣಂತಿ ಸಾ* – ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು

ವೈದ್ಯರ ನಿರ್ಲಕ್ಷ್ಯ ಆರೋಪದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಆಸ್ಪತ್ರೆ ಮುಂದೆ ಶವವನ್ನು ಇಟ್ಟು ಪ್ರತಿಭಟನೆ ಮಾಡಿರೋ ಘಟನೆ Chikkaballapura ಜಿಲ್ಲೆಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಮುಂದೆ ನಡೆದಿದೆ.
ಮಕ್ಕಳಾಗದಂತೆ ಆಪರೇಷನ್ ಬಳಿಕ ಎರಡು ತಿಂಗಳ ಬಾಣಂತಿ ಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಬಟ್ಲಹಳ್ಳಿ ಗ್ರಾಮದ ನಿವಾಸಿಯಾದ ನರ್ಮದಾ ಎಂಬುವವರು ಎರಡು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ರು. ಇನ್ನು ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದರಿಂದ ಚಿಂತಾಮಣಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡಿದ್ರು. ಆಪರೇಷನ್ ಬಳಿಕ ಎರಡು ದಿನದ ಹಿಂದೆಯಷ್ಟೇ ಆಸ್ಪತ್ರೆಯಿಂದ ನರ್ಮದಾ ಡಿಸ್ಚರ್ಜ್ ಆಗಿದ್ರು. ಆದ್ರೆ ಆಪರೇಷನ್ ಮಾಡಿರುವ ಜಾಗದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ನರ್ಮದಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ರು. ಆಸ್ಪತ್ರೆಗೆ ತಲುಪುತ್ತಿದ್ದಂತೆ ನೋವು ತಾಳಲಾರದೆ ಬಾಣಂತಿ ನರ್ಮದಾ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರೋಶ ಹೆಚ್ಚಾಗಿತ್ತು.
READ THIS : ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ

ಬಾಣಂತಿ ಶವ ಇಟ್ಟು ಪ್ರತಿಭಟನೆ
ಇನ್ನು ಚಿಂತಾಮಣಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ನರ್ಮದಾಗೆ ಸ್ತ್ರೀರೋಗ ತಜ್ಞೆಯಾದ ಡಾ. ವಾಣಿ ರೆಡ್ಡಿ ಅವರು ಮಕ್ಕಳಾಗದಂತೆ ಆಪರೇಷನ್ ಮಾಡಿದ್ದು, ಆಪರೇಷನ್ ವೇಳೆ ಆಕಸ್ಮಿಕವಾಗಿ ಸಣ್ಣ ಕರಳನ್ನು ಕತ್ತರಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸಣ್ಣ ಕರಳನ್ನು ಕತ್ತರಿಸಿರೋದ್ರಿಂದ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ.
ಅಲ್ದೇ ಆಪರೇಷನ್ ಮಾಡೋ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆ ಜೊತೆಗೆ ಆಪರೇಷನ್ ವೇಳೆ ಔಷಧಿಯನ್ನು ಕೂಡ ಹೊರಗಡೆಯಿಂದ ತರಿಸಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ರು. ಹೀಗಾಗಿ ಆಸ್ಪತ್ರೆ ಮುಂಭಾಗದಲ್ಲಿ ಬಾಣಂತಿಯ ಶವ ವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿ, ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ತಾಯಿ ಕಳೆದುಕೊಂಡ ಇಬ್ಬರು ಮಕ್ಕಳು
ಬಾಣಂತಿ ಸಾವಿನಿಂದ ಇಬ್ಬರು ಗಂಡು ಮಕ್ಕಳು ತಬ್ಬಲಿಯಾಗಿದ್ರೆ, ಹೆಂಡ್ತಿಯನ್ನು ಕಳೆದುಕೊಂಡ ಗಂಡ ಕಂಗಾಲಾಗಿದ್ದಾನೆ. ವೈದ್ಯರು ಮಾಡು ಎಡವಟ್ಟಿನಿಂದ ಕುಟುಂಬಗಳು ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನಾದ್ರು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಇಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

MUST WATCH : ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ವಿಜಯ್ ಅಬ್ಬಬ್ಬಾ ದಳಪತಿ ಗತ್ತು ಹೇಗಿದೆ ನೋಡಿ




