Bengaluru : ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ.

Bengaluru : ವಿವೇಕನಗರ ಠಾಣೆ ಪೊಲೀಸರ ವಿರುದ್ಧ ಲಾಕಪ್ ಡೆತ್ (Lockup Death) ಆರೋಪ ಕೇಳಿಬಂದಿದ್ದು, ಈ ಪ್ರಕರಣ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಸ್ಟಡಿಯಲ್ಲಿದ್ದ ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ
ಮೃತನಾದ ದರ್ಶನ್ ನವೆಂಬರ್ 15ರಂದು ಮದ್ಯಪಾನದ ನಶೆಯಲ್ಲಿ ರಸ್ತೆ ಮೇಲೆ ಗಲಾಟೆ ಮಾಡುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಪ್ರಶ್ನಿಸಿದಾಗ ದರ್ಶನ್ ಮಚ್ಚು ತೋರಿಸಿ ಬೆದರಿಸಿದ್ದಾನೆ ಎಂಬ ಆರೋಪವಿದೆ. ಇದರಿಂದಾಗಿ ಅವನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು.
ಇದನ್ನು ಓದಿ : Narendra Modi Udupi Visit|ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ!

Bengaluru – ಎರಡು ದಿನ ಕಸ್ಟಡಿ – ಹಲ್ಲೆಯ ಆರೋಪ
ದರ್ಶನ್ ಮೇಲೆ ಯಾವುದೇ FIR ದಾಖಲಿಸದೆ, ಎರಡು ದಿನಗಳ ಕಾಲ ಕಸ್ಟಡಿಯಲ್ಲೇ ಹಲ್ಲೆ ನಡೆಸಲಾಗಿದೆ ಎಂಬ ಆರೋಪವಿದೆ. ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ನೆಲಮಂಗಲದ ಯುನಿಟಿ ಸೋಷಿಯಲ್ ಸರ್ವಿಸ್ಗೆ ಪೊಲೀಸರು ಕರೆ ಮಾಡಿದ್ದಾರೆ. ಲಾಕಪ್ನಲ್ಲಿದ್ದ ದರ್ಶನನ್ನ ರಿಹ್ಯಾಬ್ ಸೆಂಟರ್ಗೆ ಸೇರಿಸಿದ್ದಾರೆ. ರಿಹ್ಯಾಬ್ ಸೆಂಟರ್ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ.
ಮೊನ್ನೆ ದರ್ಶನ್ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಾಗಿದೆ.
Bengaluru – FIR ದಾಖಲು
ಇನ್ನು ವಿವೇಕನಗರ ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ. ಇದೇ ಪ್ರಕರಣದಲ್ಲಿ ರಿಹ್ಯಾಬ್ ಸೆಂಟರ್ ಮಾಲೀಕರ ಮೇಲೂ FIR ದಾಖಲಿಸಲಾಗಿದೆ. ಮೃತ ದರ್ಶನ್ ಅವರ ತಾಯಿ ಆದಿಲಕ್ಷ್ಮಿ, “ನನ್ನ ಮಗನಿಗೆ ನ್ಯಾಯ ಕೊಡಿಸಿ” ಎಂದು ಆಗ್ರಹಿಸಿದ್ದಾರೆ.

ಇದನ್ನು ನೋಡಿ : `ಸರಾಯಾ’ ಎಂದು ಪುತ್ರಿಗೆ ನಾಮಕರಣ ಮಾಡಿದ ಕಿಯಾರಾ ಸಿದ್ಧಾರ್ಥ್




