ಎರಡು ಪ್ರಮುಖ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ತಿರುಪತಿ-ಶಿರಡಿ ಎಕ್ಸ್ಪ್ರೆಸ್ಗೆ ವಿ.Somanna ಹಸಿರು ನಿಶಾನೆ ತೋರಿದ್ದಾರೆ.

ದೇಶದ ಎರಡು ಪ್ರಮುಖ ಯಾತ್ರಾ ಕ್ಷೇತ್ರಗಳನ್ನು ನೇರವಾಗಿ ಸಂಪರ್ಕಿಸುವ ತಿರುಪತಿ–ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಇಂದು ನವದೆಹಲಿಯ ರೈಲ್ ಭವನದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿಸಿದರು.
ಮೊದಲ ನೇರ ರೈಲು
ಹೊಸ ಸಾಪ್ತಾಹಿಕ ರೈಲು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಚಾರವನ್ನು ಬಲಪಡಿಸಲಿದ್ದು, ಯಾತ್ರಾರ್ಥಿಗಳಿಗೆ ದೀರ್ಘಾವಧಿಯ ಪ್ರಯೋಜನಗಳನ್ನು ಒದಗಿಸಲಿದೆ. ದಕ್ಷಿಣ ಕರಾವಳಿ ಪ್ರದೇಶದ ಭಕ್ತರಿಗೆ ಇದು ಶಿರಡಿಗೆ ಲಭ್ಯವಾಗುತ್ತಿರುವ ಮೊದಲ ನೇರ ರೈಲು ಎಂಬ ವಿಶೇಷತೆಯನ್ನು ಹೊಂದಿದೆ.
ಇದನ್ನು ಓದಿ : ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ – ಕಂಡಕ್ಟರ್ ಸಾವು
ರಾಜ್ಯಗಳ ಭಕ್ತರಿಗೆ ಐತಿಹಾಸಿಕ ದಿನ
ತಿರುಪತಿ-ಸಾಯಿನಗರ ಶಿರಡಿ ಎಕ್ಸ್ಪ್ರೆಸ್ ಆರಂಭವು ನಾಲ್ಕು ರಾಜ್ಯಗಳ ಭಕ್ತರಿಗೆ ಐತಿಹಾಸಿಕ ದಿನವಾಗಿದೆ ಎಂದು ವಿ.ಸೋಮಣ್ಣ ಬಣ್ಣಿಸಿದ್ದಾರೆ. ಇದು ದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.ತಿರುಪತಿ ಮತ್ತು ಶಿರಡಿ ಈಗ ನೆಲ್ಲೂರು, ಗುಂಟೂರು, ಸಿಕಂದರಾಬಾದ್, ಬೀದರ್, ಮನ್ಮಾಡ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ 31 ನಿಲ್ದಾಣಗಳೊಂದಿಗೆ ನೇರ ರೈಲಿನ ಮೂಲಕ ಸಂಪರ್ಕ ಹೊಂದಿವೆ.
ಈ ಸೇವೆಯು ಮಾರ್ಗದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀರ್ಥಯಾತ್ರೆ ಪ್ರವಾಸೋದ್ಯಮ, ಸಂಪರ್ಕ ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಈ ಹೊಸ ರೈಲು ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಸಿಕಂದರಾಬಾದ್ನಿಂದ ನೇರ ಸಂಪರ್ಕವನ್ನು ಒದಗಿಸುತ್ತದೆ. ತನ್ನ ಮಾರ್ಗದಲ್ಲಿ ಇದು ಪ್ರಮುಖ ಶಿವ ದೇವಾಲಯವಾದ ಪಾರ್ಲಿ ವೈಜನಾಥ್ ಅನ್ನು ಸಹ ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನು ನೋಡಿ : FAKE BILLS | ಅರೆಯೂರು ಗ್ರಾ.ಪಂಯಲ್ಲಿ ಅವ್ಯವಹಾರ ಕೆಲಸ ಮಾಡದೇ ಬಿಲ್ ಮಾಡಿಕೊಂಡ್ರಾ




