Tumakuru ನಲ್ಲಿ ಮೋಡ ಕವಿದ ವಾತಾವರಣ – ವರುಣ ದೇವ ಜಿಲ್ಲೆ ಮೇಲೆ ಕೃಪೆ ತೋರ್ತಾನಾ?

ಅದ್ಯಾಕೋ ಏನೋ ತುಮಕೂರು ಜಿಲ್ಲೆ ಮೇಲೆ ವರುಣ ದೇವ ಮುನಿಸಿಕೊಂಡಂತೆ ಕಾಣುತ್ತಿದೆ. ಜೂನ್ 4 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದ್ರು ಕೂಡ, ಜಿಲ್ಲೆಯಲ್ಲಿ ಕೇವಲ ಎರಡು- ಮೂರು ಬಾರಿ ಮಾತ್ರ ಮಳೆ ಆಗಿತ್ತು.
ಇವತ್ತಾದರೂ ಮಳೆ ಬರುತ್ತಾ..?
ಅದಾದ ಬಳಿಕ ಕೆಲ ದಿನಗಳಿಂದ ಮಳೆಯೇ ಆಗಿರಲಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗ್ತಾ ಇದ್ರು ಕೂಡ ತುಮಕೂರು ಜಿಲ್ಲೆಯಲ್ಲಿ ಅದ್ರಲ್ಲೂ Tumakuru ನಗರ ಸುತ್ತಮುತ್ತ ಪ್ರದೇಶದಲ್ಲಿ ಮಳೆ ಮಾತ್ರ ಕಾಣದಂತಾಗಿದೆ.ದೆ̤
ಇದನ್ನು ಓದಿ : ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ!

ಮಳೆ ಪ್ರಮಾಣ ಕೊಂಚವೂ ಹೆಚ್ಚಾಗ್ತಾ ಇಲ್ಲ
ಇನ್ನು ಕಳೆದ ಎರಡು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ಬಿಸಿಲು ರಣರಣ ಅಂತಿತ್ತು. ಬೇಸಿಗೆಯಲ್ಲೂ ಉಷ್ಣಾಂಶ ಅಧಿಕವಾಗಿತ್ತು. ಇದೀಗ ಮುಂಗಾರು ಮಳೆ ಶುರುವಾಗಿದ್ರು ಕೂಡ ಮಳೆ ಪ್ರಮಾಣ ಕೊಂಚವೂ ಹೆಚ್ಚಾಗ್ತಾ ಇಲ್ಲ. ಬದಲಾಗಿ ಆಗಾಗ ಬಿಸಿಲು ಹೆಚ್ಚಾಗ್ತಾನೆ ಇದೆ.

ಇಂದು Tumkur ನಲ್ಲಿ ಮೋಡ ಕವಿದ ವಾತಾವರಣ
ಕಳೆದ ಎರಡು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ಬಿಸಿಲು ನೆತ್ತಿಯ ಸುಡುತ್ತಿತ್ತು. ಇಂದು ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಇಂದು ಮಳೆ ಆಗುವ ಸಾಧ್ಯತೆ ಇದೆ. ಇತ್ತ ಈಗಾಗಲೇ ಕೆಲ ರೈತರು ಬಿತ್ತನೆ ಕೆಲಸ ಶುರು ಮಾಡಿಕೊಂಡಿದ್ದು, ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.

ಇದನ್ನು ನೋಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು – HIGHWAY ತಡೆದು ಅನ್ನದಾತರ ಆಕ್ರೋಶ.!




