Tumakuru : ಮುಂದುವರಿದ ನವಿಲುಗಳ ಸರಣಿ ಸಾವು – ಮತ್ತೆರಡು ಕಳೇಬರ ಪತ್ತೆ

ತುಮಕೂರು ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಮುಂದುವರೆದಿದ್ದು, ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ಆತಂಕ ಸೃಷ್ಠಿಸಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ನವಿಲುಗಳ ಸಾವಿನ ಪ್ರಕರಣಗಳು ವರದಿಯಾಗಿದ್ದ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಎರಡು ನವಿಲುಗಳ ಕಳೇಬರ ಪತ್ತೆ!
ತುಮಕೂರಿನ ಹೊರವಲಯದ ಗೂಳರಿವೆ ಬಳಿಯಿರುವ ಸುಣ್ಣಕಲ್ಲು ಕಟ್ಟೆ ಸಮೀಪ ಎರಡು ನವಿಲುಗಳ ಕಳೇಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾವನ್ನಪ್ಪಿರುವ ನವಿಲುಗಳ ಸಾವಿನ ನಿಖರ ಕಾರಣ ಪತ್ತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
READ THIS : ಗಂಡ ಮನೆಯಲ್ಲಿರುವಾಗಲೇ ನೇಣಿಗೆ ಶರಣಾದ ಹೆಂಡತಿ!

ಕಟ್ಟು ನಿಟ್ಟಿನ ಕ್ರಮ
ಇನ್ನು ಕಳೆದ 15 ದಿನಗಳ ಹಿಂದೆ ತುಮಕೂರು ತಾಲೂಕಿನ ಹಲವು ಕಡೆಗಳಲ್ಲಿ ಸುಮಾರು 44 ನವಿಲುಗಳ ಕಳೇಬರ ಪತ್ತೆಯಾಗಿತ್ತು. ಬಳಿಕ ನವಿಲುಗಳ ದೇಹದ ಕೆಲ ಭಾಗಗಳನ್ನ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಿಗೆ ಎಚ್5ಎಚ್1 ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅರಣ್ಯ ಹಾಗೂ ಪಶು ಸಂಗೋಪನಾ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಆದ್ರೂ ಇದೀಗ ಮತ್ತೆ ಎರಡು ನವಿಲುಗಳು ಸಾವನ್ನಪ್ಪಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
Tumakuru – 50ಕ್ಕೂ ಹೆಚ್ಚು ನವಿಲುಗಳ ಕಳೇಬರ ಪತ್ತೆ
ಇನ್ನು ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ನವಿಲುಗಳ ಕಳೇಬರ ಪತ್ತೆಯಾಗಿವೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಸದ್ಯ ನವಿಲುಗಳ ಸಾವಿನ ಬಗ್ಗೆ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರು ಸತ್ತ ಪಕ್ಷಿಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

MUST WATCH : DGP RAMACHANDRA RAOಗೆ ಬಿಗ್ ರಿಲೀಫ್ – ಅಮಾನತು ಆದೇಶ ವಾಪಸ್ ಪಡೆದ ಸರ್ಕಾರ




