ದಾರುಣ ಘಟನೆ – ಗಂಡ ಮನೆಯಲ್ಲಿರುವಾಗಲೇ ಹೆಂಡತಿ Suicide!

ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಯಶವಂತಪುರದಲ್ಲಿ ನಡೆದಿದೆ. ಮೃತ ಯುವತಿಯನ್ನು ಶಾರದ ಎಂದು ಗುರುತಿಸಲಾಗಿದೆ.
“ನಾನು ಸಾಯುತ್ತೇನೆ”
ಶಾರದ ತನ್ನ ಗಂಡ ಮಹೇಶ್ ಮನೆಯಲ್ಲಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡುವ ಮುನ್ನ ಶಾರದ ಪತಿಗೆ ವಿಡಿಯೋ ಕಾಲ್ ಮಾಡಿ “ನಾನು ಸಾಯುತ್ತೇನೆ” ಎಂದು ಹೇಳಿದ್ದರೂ, ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನಲಾಗಿದೆ.
READ THIS : Agniveer 2026|ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ

ಕುಟುಂಬಸ್ಥರ ಆರೋಪವೇನು..?
ಮದುವೆಯಾದ ದಿನದಿಂದಲೇ ಶಾರದಾಗ ಗಂಡನ ಮನೆಯವರು ಹಣದ ವಿಚಾರವಾಗಿ ನಿರಂತರ ಕಿರುಕುಳ ನೀಡುತ್ತಿದ್ದರು. ಈ ಮಾನಸಿಕ ಹಿಂಸೆಯಿಂದ ಬೇಸತ್ತು ಶಾರದ Suicide ಮಾಡಿಕೊಂಡಿರಬಹುದು ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
Suicide – ಪ್ರಕರಣ ದಾಖಲು
ಇನ್ನು ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು, ಕುಟುಂಬದವರು ಮಾಡಿರುವ ಆರೋಪಗಳು ಸತ್ಯವೋ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

MUST WATCH : ಬೆಂಗಳೂರು- ತುಮಕೂರು ಹೈವೇಯಲ್ಲಿ ಆಕ್ಸಿಡೆಂ ಸರಣಿ ಅಪಘಾತಕ್ಕೆ ಲಾರಿ ಚಾಲಕನ ಕಾಲ್ ಕಟ್




