Sandalwood : ಕರಾವಳಿ ಸಿನಿಮಾ ಗಲಾಟೆ ಪ್ರಕರಣ : ನಟ ಪ್ರಜ್ವಲ್ ದೇವರಾಜ್ಗೆ ಪೊಲೀಸರಿಂದ ನೋಟಿಸ್ ಸಾಧ್ಯತೆ!

ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ಕರಾವಳಿ’ ಸಿನಿಮಾಕ್ಕೆ ಸಂಬಂಧಿಸಿದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರ ವಿರುದ್ಧ ದೂರು ದಾಖಲಾಗಿದೆ.
ಆವಾಚ್ಯ ಶಬ್ದಗಳಿಂದ ಬೈದು ಬೆದರಿಕೆ
ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾರೆ. ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗೂ ಅಲ್ಲಿಗೆ ಬಂದಂತಹ ಅತಿಥಿಗಳಿಗೆ ಎಲ್ಲರಿಗೂ ತೊಂದರೆ ಕೊಟ್ಟಿದ್ದಾರೆ. ಆವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಅಂತ ದೂರು ಸಲ್ಲಿಸಿದ್ದಾರೆ.
ಇದನ್ನು ಓದಿ : Sandalwood|ಗಳಗಳನೇ ಕಣ್ಣೀರಿಟ್ಟ ನಟ ಅನೀಶ್

ವ್ಯವಹಾರದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಗಲಾಟೆ ಆರೋಪ
ದಿಲೀಪ್, ಅವಿನಾಶ್ ಹಾಗೂ ನಂದಕುಮಾರ್ ಎನ್ನುವರ ವಿರುದ್ಧ ದೂರು ದಾಖಲಾಗಿದೆ. ಅಂಕಿತ್ ಎನ್ನುವವರು ಕೊಟ್ಟ ದೂರಿನಿಂದ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ನಟ ಪ್ರಜ್ವಲ್ ಗಲಾಟೆ ಮಾಡಿಸಿದರ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ವ್ಯವಹಾರದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಗಲಾಟೆ ಆರೋಪ ಕೇಳಿ ಬಂದಿದೆ.
Sandalwood ನಟ ಪ್ರಜ್ವಲ್ ದೇವರಾಜ್ ಗೆ ಪೊಲೀಸರಿಂದ ನೋಟಿಸ್ ಸಾಧ್ಯತೆ!
ಇನ್ನು ಗಲಾಟೆ ನಡೆಸಿದವರು ಅಭಿಮಾನಿಗಳಲ್ಲ, ನಟ ಪ್ರಜ್ವಲ್ ದೇವರಾಜ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಸಹಾಯಕರು ಹಾಗೂ ‘ಕರಾವಳಿ’ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದವರು ಎಂದು ತಿಳಿದುಬಂದಿದೆ.
ಗಲಾಟೆಗೆ ಪ್ರಜ್ವಲ್ ಸೂಚನೆ ನೀಡುತ್ತಾರೆ ಎನ್ನುವ ಬಗ್ಗೆ ತನಿಖೆ ಶುರುವಾಗಿದ್ದು ನಟ ಪ್ರಜ್ವಲ್ ದೇವರಾಜ್ ಅವರಿಗೂ ಕೂಡ ಹಾಗೂ ಆರೋಪಿಗಳಿಗೂ ಸಂಪರ್ಕವಿದ್ದ ಮಾಹಿತಿ ಲಭ್ಯವಾಗಿದ್ದು ಆರೋಪಿಗಳ ಬಂಧನ ಬಳಿಕ ನಟ ಪ್ರಜ್ವಲ್ ದೇವರಾಜ್ಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಇದನ್ನು ನೋಡಿ : BESCOM ನಿರ್ಲಕ್ಷ್ಯಕ್ಕೆ ಮತ್ತೊಂದು ಬ*! – ಕಂಬದ ಮೇಲೆಯೇ ನೇತಾಡಿ ಮೃತಪಟ್ಟ LINE MAN



