RCB Team 2025 : ಐಪಿಎಲ್ ಮಿನಿ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಾಳ್ಮೆಯ ಹಾಗೂ ತಂತ್ರಬದ್ಧ ನಡೆ ಮೂಲಕ ಬಲಿಷ್ಠ ತಂಡವನ್ನು ರೂಪಿಸಿದೆ.

RCB Team 2025 : ಐಪಿಎಲ್ ಮಿನಿ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಾಳ್ಮೆಯ ಹಾಗೂ ತಂತ್ರಬದ್ಧ ನಡೆ ಮೂಲಕ ಬಲಿಷ್ಠ ತಂಡವನ್ನು ರೂಪಿಸಿದೆ. ಪರ್ಸ್ನಲ್ಲಿ ಕಡಿಮೆ ಹಣ ಇದ್ದರೂ, ಟಾರ್ಗೆಟ್ ಲಿಸ್ಟ್ನಲ್ಲಿದ್ದ ಬಹುತೇಕ ಆಟಗಾರರನ್ನು ಚೀಪ್ ಅಂಡ್ ಬೆಸ್ಟ್ ಪಿಕ್ ಮೂಲಕ ಪಡೆದುಕೊಳ್ಳುವಲ್ಲಿ ರೆಡ್ ಆರ್ಮಿ ಯಶಸ್ವಿಯಾಗಿದೆ.
ಆಕ್ಷನ್ನಲ್ಲಿ ಜಾಣ ಹೆಜ್ಜೆ – ಸ್ಟಾರ್ ಮತ್ತು ಯುವ ಪ್ರತಿಭೆಗಳ ಮಿಶ್ರಣ
ಕೆಕೆಆರ್ ಜೊತೆ ಬಿಗ್ ಫೈಟ್ ನಡೆಸಿ ವೆಂಕಟೇಶ್ ಅಯ್ಯರ್ರನ್ನು 7 ಕೋಟಿಗೆ ಖರೀದಿಸಿದ RCB, ವಿಶ್ವದ ನಂ.2 ಟಿ20 ಬೌಲರ್ ಜೇಕಬ್ ಡಫಿಯನ್ನು ಕೇವಲ 2 ಕೋಟಿಗೆ ಪಡೆದುಕೊಂಡಿದೆ. ಮಧ್ಯಪ್ರದೇಶದ ಯುವ ಆಲ್ರೌಂಡರ್ ಮಂಗೇಶ್ ಯಾದವ್ (₹5.20 ಕೋಟಿ) ಪ್ರಮುಖ ಸೇರ್ಪಡೆ ಆಗಿದ್ದಾರೆ.
ಇದಕ್ಕೆ ಜೊತೆಗೆ, ಮಿನಿ ಆಕ್ಷನ್ನ ಸರ್ಪ್ರೈಸ್ ಪಿಕ್ ಆಗಿ 18 ವರ್ಷದ ಸತ್ವಿಕ್ ದೆಸ್ವಾಲ್ನ್ನು ₹30 ಲಕ್ಷಕ್ಕೆ, ಇಂಗ್ಲೆಂಡ್ನ ಯುವ ವಿಕೆಟ್ ಕೀಪರ್ ಜೋರ್ಡನ್ ಕಾಕ್ಸ್ನ್ನು ಬೇಸ್ ಪ್ರೈಸ್ಗೆ RCB ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಅಂಡರ್-19 ಏಷ್ಯಾಕಪ್ನಲ್ಲಿ ಮಿಂಚಿದ ವಿಹಾನ್ ಮಲ್ಹೋತ್ರ, ಯುವ ಆಲ್ರೌಂಡರ್ ವಿಕ್ಕಿ ಓಟ್ಸಾಲ್ ಮತ್ತು ಕನಿಶ್ಕ್ ಚೌಹಾಣ್ ಮೇಲೂ RCB ಮಣೆ ಹಾಕಿದೆ.
ಪರ್ಸ್ ನಿರ್ವಹಣೆಯಲ್ಲಿ ಮಾಸ್ಟರ್ ಸ್ಟ್ರೋಕ್
ಜಾಣ ನಿರ್ಧಾರಗಳ ಮೂಲಕ RCB ಎಲ್ಲಾ 8 ಸ್ಲಾಟ್ಗಳನ್ನು ಭರ್ತಿ ಮಾಡಿದ್ದು, ಪರ್ಸ್ನಲ್ಲಿ ₹25 ಲಕ್ಷ ಹಣ ಉಳಿಸಿಕೊಂಡಿದೆ. ಇದು ತಂಡದ ಮ್ಯಾನೇಜ್ಮೆಂಟ್ ತಂತ್ರದ ಸ್ಪಷ್ಟ ಉದಾಹರಣೆ.
RCB ಹೊಸ ತಂಡ – ಸಂಪೂರ್ಣ ಆಟಗಾರರ ಪಟ್ಟಿ
ಬ್ಯಾಟಿಂಗ್ ವಿಭಾಗ
- ರಜತ್ ಪಾಟೀದಾರ್
- ದೇವದತ್ ಪಡಿಕ್ಕಲ್
- ವಿರಾಟ್ ಕೊಹ್ಲಿ
- ಫಿಲ್ ಸಾಲ್ಟ್
- ಜಿತೇಶ್ ಶರ್ಮಾ
- ಜೋರ್ಡನ್ ಕಾಕ್ಸ್
ಆಲ್ರೌಂಡರ್ಸ್
- ಕೃನಾಲ್ ಪಾಂಡ್ಯ
- ಸ್ವಪ್ನಿಲ್ ಸಿಂಗ್
- ಟಿಮ್ ಡೇವಿಡ್
- ರೊಮಾರಿಯೋ ಶೆಫಾರ್ಡ್
- ಜಾಕೊಬ್ ಬೆಥಲ್
- ವೆಂಕಟೇಶ್ ಅಯ್ಯರ್
- ಸತ್ವಿಕ್ ದೆಸ್ವಾಲ್
- ಮಂಗೇಶ್ ಯಾದವ್
- ವಿಕ್ಕಿ ಓಟ್ಸಾಲ್
- ವಿಹಾನ್ ಮಲ್ಹೋತ್ರ
- ಕನಿಶ್ಕ್ ಚೌಹಾಣ್
ಬೌಲಿಂಗ್ ವಿಭಾಗ
- ಜೋಶ್ ಹೇಜಲ್ವುಡ್
- ರಶಿಕ್ ದಾರ್
- ಸುಯೇಶ್ ಶರ್ಮಾ
- ಭುವನೇಶ್ವರ್ ಕುಮಾರ್
- ನುವಾನ್ ತುಷಾರ
- ಅಭಿನಂದನ್ ಸಿಂಗ್
- ಜೇಕಬ್ ಡಫಿ
- ಯಶ್ ದಯಾಳ್
ಒಟ್ಟಿನಲ್ಲಿ, ಅನುಭವ ಮತ್ತು ಯುವ ಪ್ರತಿಭೆಗಳ ಸಮತೋಲನದೊಂದಿಗೆ RCB ಈ ಬಾರಿ ಟೈಟಲ್ ಗುರಿ ಇಟ್ಟುಕೊಂಡು ಬಲಿಷ್ಠವಾಗಿ ಕಣಕ್ಕಿಳಿಯಲು ಸಜ್ಜಾಗಿದೆ.




