Rain : ತುಮಕೂರು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ರಣ ರಣ ಅಂತಿದೆ ಬಿಸಿಲು

ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ( Rain) ಆರಂಭವಾಗಿದೆ. ಜೂನ್ 4 ರಂದು ಮುಂಗಾರು ಮಳೆ ಆರಂಭವಾಗಿ ಆಗಿದ್ರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದು ಜನರನ್ನು ಆತಂಕಕ್ಕೆ ದೂಡುವಂತೆ ಮಾಡ್ತಿದೆ.
ಹೌದು ಮುಂಗಾರು ಮಳೆ ಆರಂಭದಲ್ಲೇ ಆತಂಕ ಎದುರಾಗಿದ್ದು, ಜೂನ್ 1ರಿಂದ ಈವರೆಗೂ ಶೇಕಡಾ 21ರಷ್ಟು ಮಳೆಯ ಕೊರತೆ ಉಂಟಾಗಿದೆ.

ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ
ರಾಜ್ಯದಲ್ಲಿ ಹೆಚ್ಚು ಮಳೆ ಆಗುವ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿಯೂ ಈ ಬಾರಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಜಲಾಶಯಗಳು ಅಷ್ಟಾಗಿ ಭರ್ತಿ ಆಗಿಲ್ಲ. ಪ್ರತಿ ವರ್ಷ ಇಷ್ಟೋತ್ತಿಗಾಗಲೇ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗಿರ್ತಾ ಇತ್ತು. ಆದ್ರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದು ಆತಂಕವನ್ನು ಸೃಷ್ಟಿ ಮಾಡ್ತಿದೆ. ಇತ್ತ ಮುಂಗಾರು ಮಳೆಯೂ ಆಗ್ತಾ ಇಲ್ಲ, ಅತ್ತ ಅರಬ್ಬಿಸಮುದ್ರ ಅಥವಾ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತನೂ ಉಂಟಾಗದೇ ಇದ್ದು, ರಾಜ್ಯದಲ್ಲಿ ಒಣಹವೆಯಿಂದ ಕೂಡಿದೆ.
ಇದನ್ನು ಓದಿ : ರಾಜ್ಯದ ಈ ಜಿಲ್ಲೆಯಲ್ಲಿ ಮುಂದಿನ 3 ಗಂಟೆ ಭಾರೀ ಮಳೆ!

ತುಮಕೂರು ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ರಣ ರಣ ಅಂತಿದೆ ಬಿಸಿಲು
ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್ 4 ರಿಂದ ಇಲ್ಲಿಯವರೆಗೂ ಭಾರೀ ಮಳೆ ಆಗಿತ್ತು. ಆದ್ರೆ ತುಮಕೂರಿನ ಮೇಲೆ ಮಳೆರಾಯ ಅದ್ಯಾಕೋ ಮುನಿಸುಕೊಂಡಂತೆ ಕಾಣುತ್ತಿದೆ.
ಮುಂಗಾರು ಮಳೆ ಆರಂಭವಾಗಿದ್ದಾಗಿನಿಂದಲೂ ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಕೊಟ್ಟಿತ್ತು.

ಮೋಡ ಕವಿದ ವಾತಾವರಣ ಇದ್ರು ಕೂಡ ಮಳೆ ಮಾತ್ರ ಆಗ್ತಾ ಇರಲಿಲ್ಲ. ಆಗಾಗ್ಗ ಅಲ್ಲಲ್ಲಿ ಅಲ್ಪ- ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಳೆ ಆಗಿದ್ದು ಬಿಟ್ಟರೆ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಆಗಿರಲಿಲ್ಲ. ನಿನ್ನೆವರೆಗೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಇಂದು ಬೆಳಗ್ಗೆಯಿಂದಲೂ ಜಿಲ್ಲೆಯಲ್ಲಿ ಬಿಸಿಲು ರಣ ರಣ ಅಂತಿದೆ. ಬೇಸಿಗೆ ಕಾಲದಂತೆ ಜಿಲ್ಲೆಯಲ್ಲಿ ಬಿಸಿಲು ಸುಡುತ್ತಿದ್ದು ಜಿಲ್ಲೆಯ ರೈತರನ್ನು ಕಂಗೆಡಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಆದ್ರು ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಾ..? ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನು ನೋಡಿ : ROWDY PARADE | ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್ ಬಾಲ ಬಿಚ್ಚಿದ್ರೆ ಗಡಿಪಾರು ಫಿಕ್ಸ್




