TUMAKURU NEWS : ತುಮಕೂರಿನ ಕ್ಯಾತ್ಸಂದ್ರ ಯೂತ್ಸ್ ಹಾಗೂ ಫುಟ್ಬಾಲ್ ಆಟಗಾರರು ಡ್ರಗ್ ಮುಕ್ತ ತುಮಕೂರಿಗಾಗಿ ಪಣ ತೊಟ್ಟಿದ್ದು, ಡ್ರಗ್ ವಿರುದ್ಧ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಕ್ಯಾತ್ಸಂದ್ರದ ಶಾಲಾ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಡ್ರಗ್ ಬೇಡ, ಆರೋಗ್ಯ ಬೇಕು ಎಂಬ ಘೋಷವಾಕ್ಯದೊಂದಿಗೆ ಜಾಥ ನಡೆಸಿದ್ರು. ಡ್ರಗ್ ವಿರುದ್ಧ ಜಾಗೃತಿ ಅಭಿಯಾನಕ್ಕೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ ಚಾಲನೆ ನೀಡಿದ್ದು, ಜಾಥಾದಲ್ಲಿ ನೂರಾರು ಮಂದಿ ಯುವಕರು ಭಾಗಿಯಾಗಿದ್ರು.
ಕ್ಯಾತ್ಸಂದ್ರ ಯೂತ್ ಮುಖ್ಯಸ್ಥ ನೂರ್ ಮಾತನಾಡಿ, ಯುವಕರು ದುಶ್ಚಟಗಳನ್ನು ಬಿಟ್ಟು ಆರೋಗ್ಯಕರ ಜೀವನ ನಡೆಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎನ್ನುವುದು ನಮ್ಮ ಜಾಗೃತಿಯ ಉದ್ದೇಶವಾಗಿದೆ. ನಾವು ಈಗಾಗಲೇ ಒಂದು ವಾರದಿಂದ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದ್ವಿ ಎಂದ್ರು,
ಸ್ಥಳೀಯರು ಮಾತನಾಡಿ ಮುಂಚೆ ಕ್ಯಾತ್ಸಂದ್ರದಲ್ಲಿಫುಟ್ಬಾಲ್ ಆಟಗಾರರು ತುಂಬಾ ಹೆಚ್ಚಾಗಿದ್ದರು ಆದರೆ ಇದೀಗ ಎಲ್ಲ ಯುವಕರು ಕ್ರೀಡೆಗಳಲ್ಲಿ ಭಾಗಿಯಾಗದೆ ದುಶ್ಚಟಗಳ ಹಿಂದೆ ಬಿದ್ದಿದ್ದಾರೆ . ಯುವಕರು ಮತ್ತೆ ಮರಳಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಹಾಗೂ ಎಲ್ಲಾ ನಾಗರೀಕರಿಗೂ ಡ್ರಗ್ಸ್ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದ್ರು.
ಇನ್ನು ಕ್ಯಾತ್ಸಂದ್ರ ಯುವಕರು ನಡೆಸಿದ ಜಾಗೃತಿ ಅಭಿಯಾನಕ್ಕೆ ಪೊಲೀಸರು ಸಾಥ್ ಕೊಟ್ಟಿದ್ದು ವಿಶೇಷವಾಗಿತ್ತು. ಯುವಕರ ಕಾರ್ಯಕ್ಕೆ ಪೊಲೀಸರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ರು.