ಮೈಸೂರು : ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋದ ಯುವತಿ | ಮನನೊಂದ ಕುಟುಂಸ್ಥರು ಆತ್ಮಹತ್ಯೆಗೆ ಶರಣು

ಮೈಸೂರು : ಮೈಸೂರಿನ ಹೆಚ್‌ಡಿ ಕೋಟೆ ತಾಲೂಕಿನ ಬಂದನೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ಹೋದ ಮಗಳ ಘಟನೆ ಮನನೊಂದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.  ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಮತ್ತು ಮಗಳು ಹರ್ಷಿತಾ ಎಂಬ ಮೂವರು  ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕೆ ವ್ಯಕ್ತವಾಗಿದೆ.

ಇನ್ನು ಮಾಹಿತಿಯ ಪ್ರಕಾರ, ಮಹದೇವಸ್ವಾಮಿಯ ಹಿರಿಯ ಪುತ್ರಿ ಅರ್ಪಿತಾ ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ಹೋಗಿದ್ದಳು. ಈ ಸಂಗತಿ ಕುಟುಂಬದ ಮೇಲೆ ಭಾರೀ ಪರಿಣಾಮ ಬೀರಿದ್ದು, ಮನನೊಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಬೂದನೂರು ಕೆರೆಯ ಏರಿಯ ಮೇಲೆ ಅವರ ಬೈಕ್ ಮತ್ತು ಮೂವರ ಚಪ್ಪಲಿಗಳು ಪತ್ತೆಯಾಗಿದ್ದು, ಪ್ರಸ್ತುತ ಪೊಲೀಸರು ಮತ್ತು ಸ್ಥಳೀಯರು ಮೂರವರ ಶವಗಳಿಗಾಗಿ ಜಲಸಂಧಾನ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಈ ಘಟನೆ ಸಂಬಂಧಿಸಿದಂತೆ ಹೆಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Author:

...
Keerthana J

Copy Editor

prajashakthi tv

share
No Reviews