ಬೆಂಗಳೂರು : ಬಸವೇಶ್ವರನಗರದಲ್ಲಿ ಹೃದಯಾಘಾತದಿಂದ ಯುವ ಕ್ಯಾಬ್ ಚಾಲಕ ಸಾವು

ಬೆಂಗಳೂರು : ಬೆಂಗಳೂರಿನ ಬಸವೇಶ್ವರನಗರದಲ್ಲಿ ಹೃದಯಾಘಾತದಿಂದ ಯುವ ಕ್ಯಾಬ್ ಚಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತನನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ನಿವಾಸಿ ಅಭಿಷೇಕ್ (19) ಎಂದು ಗುರುತಿಸಲಾಗಿದೆ.

ಅಭಿಷೇಕ್, ಕಾಡನೂರು ಗ್ರಾಮದ ಅನಸೂಯಾ ಹಾಗೂ ರಾಮಕೃಷ್ಣ ದಂಪತಿಯ ಪುತ್ರನಾಗಿದ್ದು, ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇನ್ನು ಅಭಿಷೇಕ್‌ ಬಸವೇಶ್ವರನಗರದಲ್ಲಿ ನಿಂತಿದ್ದ ಜಾಗದಲ್ಲೇ ಏಕಾಏಕಿ ಕುಸಿದು ಬಿದ್ದರು. ಆತನನ್ನು ನೋಡಿದ ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಮಾರ್ಗ ಮಧ್ಯೆಯೇ ಅವರು ಕೊನೆಯು ಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಅಭಿಷೇಕ್‌ನ ನಿಧನದಿಂದ ಅವರ ಪೋಷಕರು ಹಾಗೂ ಬಂಧುಮಿತ್ರರು ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮದವರೆಲ್ಲಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

Author:

...
Keerthana J

Copy Editor

prajashakthi tv

share
No Reviews