ಶಿರಾ:
ಶಿರಾ ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗ್ತಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ. ಶಿರಾ ನಗರದ 24ನೇ ವಾರ್ಡ್ಗಳಲ್ಲಿ ಅಳವಡಿಸಿರೋ ಯುಜಿಡಿ ಪೈಪ್ ಗಳಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದು ಬರ್ತಿದ್ದು ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಶಿರಾ ನಗರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಕೂಡ ಕೊಳಚೆ ನೀರಿನ ಸಮಸ್ಯೆ ನಿವಾರಣೆ ಮಾತ್ರ ಕಂಡಿಲ್ಲ. ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿರೋದರಿಂದ ಗಬ್ಬೇದ್ದು ಇಡೀ ಏರಿಯಾವೇ ಗಬ್ಬೇದು ನಾರುತ್ತಿದೆ, ಇದರಿಂದ ಮೂಗು ಮುಚ್ಚಿಕೊಂಡೇ ವಾಸ ಮಾಡ್ತಾ ಇದ್ದು, ಅನಾರೋಗ್ಯದ ಭೀತಿ ಕಾಡುತ್ತಿದೆ. ಯುಜಿಡಿ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಾ ಇದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಯುಜಿಡಿ ಸಮಸ್ಯೆಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.