ತುಮಕೂರು :
ಇಂದು ನಾಡಿನೆಲ್ಲೆಡೆ ಬಸವ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ತುಮಕೂರು ಜಿಲ್ಲೆಯ ನಾಗವಲ್ಲಿಯಲ್ಲಿ ಇದೇ ಮೊದಲ ಬಾರಿಗೆ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು.
ನಾಗವಲ್ಲಿ ವೃತ್ತದಲ್ಲಿ ಬಸವಣ್ಣನ ಪೋಟೋಗೆ ಪೂಜೆ ಮಾಡಿ ಮೊದಲ ಪ್ರಸಾದವನ್ನು ಬಸವನಿಗೆ ನೀಡಲಾಯಿತು. ನಂತರ ಬಸವ ಜಯಂತಿಗೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆಯನ್ನು ವಿತರಿಸಲಾಯಿತು. ಇನ್ನು ಇದೇ ವೇಳೆ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೂರ್ತಿ ಮಾತನಾಡಿ, ಇಂದು ವಿಶ್ವಗುರು ಅವರ ಸಂದೇಶವು ಇಡೀ ವಿಶ್ವಕ್ಕೆ ಇಂದು ಅಗತ್ಯವಿದೆ. ಪ್ರತಿಯೊಬ್ಬರು ಕೂಡ ಬಸವಣ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಮೊದಲ ಬಾರಿಗೆ ನಾಗವಲ್ಲಿಯಲ್ಲಿ 18 ಕೋಮಿನ ಜನರು ಸೇರಿ ಬಸವಣ್ಣನ ಜಯಂತಿ ಆಚರಿಸುತ್ತಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗವಲ್ಲಿ ರಾಮಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಗಳ ಗೌರಮ್ಮ, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.