ಪಾವಗಡ : ಗಡಿ ತಾಲೂಕಿನ ಗ್ರಾಮಗಳಂದ್ರೆ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರಾ?

ಪಾವಗಡ :

ಪಾವಗಡ ಗಡಿ ತಾಲೂಕು ಆಗಿದ್ದು, ತಾಲೂಕಿನ ಹಳ್ಳಿ- ಹಳ್ಳಿಗಳಲ್ಲಿ ಸಮಸ್ಯೆಗಳು ತಾಂಡವ ಆಡ್ತಿವೆ. ಕೆಲವೊಂದು ಗ್ರಾಮಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳಿಂದ ವಂಚಿತರಾದರೆ, ಇನ್ನು ಕೆಲ ಗ್ರಾಮಗಳಲ್ಲಿ ರಾಜಕೀಯ ಪ್ರಭಾವದಿಂದಾಗಿ ಗ್ರಾಮದಲ್ಲಿ ಬದುಕುಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ.

ಪಾವಗಡ ತಾಲೂಕಿನ ಮುಗುದಾಳ್ ಬೆಟ್ಟ ಗ್ರಾಮದಲ್ಲಿರೋ ಗೊಲ್ಲರಹಟ್ಟಿ ತಾಂಡ ಜನರಿಗೆ ಈವರೆಗೂ ಮೂಲಭೂತ ಸೌಕರ್ಯಗಳೇ ಸಿಗ್ತಾ ಇಲ್ಲವಂತೆ. ಇಲ್ಲಿನ ಮಹಿಳೆಯರಿಗೆ ಸ್ನಾನದ ಗೃಹ, ಶೌಚಾಲಯದ ವ್ಯವಸ್ಥೆ ಕೂಡ ಇಲ್ಲವಾಗಿದೆ. ಇದರಿಂದ ನಿತ್ಯ ಇಲ್ಲಿನ ಮಹಿಳೆಯರು ಜೀವನ ನಡೆಸೋದು ಕಷ್ಟವಾಗ್ತಿದೆ ಎಂದು ಇಲ್ಲಿನ ಸ್ಥಳೀಯರು ಆರೋಪ ಮಾಡ್ತಿದ್ದಾರೆ. ರಾಜಕೀಯ ನಾಯಕರು ಗೊಲ್ಲರಹಟ್ಟಿಯ ಜನರನ್ನು ವೋಟ್‌ ಬ್ಯಾಂಕ್‌ ಆಗಿ ಮಾತ್ರ ಬಳಸಿಕೊಳ್ತಾರೆ ಹೊರತು ಇಲ್ಲಿನ ಜನರಿಗೆ ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸ್ತಾ ಇಲ್ಲ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.

ಇನ್ನು ಮುಗುದಾಳ್‌ ಬೆಟ್ಟ ಗ್ರಾಮದ ಸುಮಾರು 2 ಎಕರೆ 26 ಗುಂಟೆ ಜಮೀನನ್ನು ಈ ಗ್ರಾಮದಲ್ಲಿದ್ದ ಶ್ರೀಮಂತರು ಗೊಲ್ಲರಹಟ್ಟಿ ಜನಕ್ಕೆ ದಾನವಾಗಿ ನೀಡಿದ್ದರು. ಆದರೆ ಅವರ ನಿಧನದ ನಂತರ ಅವರ ಮಕ್ಕಳು ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಆದರೆ ಆ ಜಮೀನನ್ನು ಅಲ್ಲಿನ ಜನರಿಗೆ ನೀಡುವಂತೆ ಕೋರ್ಟ್‌ ಆದೇಶ ನೀಡಿತ್ತು. ಹೀಗಾಗಿ ಗೊಲ್ಲರಹಟ್ಟಿ ಜನ ಸ್ನಾನದ ಮನೆಗಳು ಹಾಗೂ ಶೌಚಾಲಯವನ್ನು ಕಟ್ಟಿಸಿಕೊಳ್ತಾ ಇದ್ದರು. ಆದರೆ ಜಮೀನು ದಾನ ಕೊಟ್ಟಿದ್ದ ವಾರಸುದಾರನ ಮಗ ಮತ್ತೆ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರಿಂದ ಅರ್ಧಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಅಲ್ಲದೇ ಕೋರ್ಟ್ ನಲ್ಲಿ ಮತ್ತೆ ಗ್ರಾಮಸ್ಥರ ಪರವಾಗಿಯೇ ಆಗಿದ್ದರೂ ಕೂಡ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯವನ್ನು ಕೊಡ್ತಾ ಇಲ್ಲ ಹೀಗಾಗಿ ಸಮಾಜದ ಮುಖಂಡರು ಸಭೆ ಸೇರಿ ಆಕ್ರೋಶ ಹೊರಹಾಕಿದರು.

ಇನ್ನು ಈ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಿಳೆಯರು ಈಗಲು ಸೀರೆಯನ್ನು ಕಟ್ಟಿಕೊಂಡು ಸ್ನಾನ ಮಾಡುವ ದುಸ್ಥಿತಿ ಇದೆ. ಅಲ್ಲದೇ ಶೌಚಾಲಯದ ವ್ಯವಸ್ಥೆ ಇಲ್ಲದೇ ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವಂತಾಗಿದೆ. ಜನಪ್ರತಿನಿಧಿಗಳು, ರಾಜಕಾರಣಿಗಳು ಎಲೆಕ್ಷನ್‌ ಬಂದಾಗ ಮಾತ್ರ ಬರ್ತಾರೆ ಅಷ್ಟೇ ಅಂತಾ ಸಮುದಾಯದ ಮುಖಂಡರು ಆಕ್ರೋಶ ಹೊರಹಾಕಿದರು. ಕೂಡಲೇ ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಆಗ್ರಹಿಸಿದರು.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ, ಇಲ್ಲಿನ ಜನರಿಗೆ ಬೇಕಾದ ಕನಿಷ್ಠ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

Author:

...
Sushmitha N

Copy Editor

prajashakthi tv

share
No Reviews