ತುಮಕೂರು:
ತುಮಕೂರಿನ ಎನ್.ಆರ್.ಕಾಲೋನಿಯಲ್ಲಿ ಹಕ್ಕುಪತ್ರಗಳಿಲ್ಲದೆ ಜನರು ಪರದಾಡುತ್ತಿದ್ದು, ತಮಗೆ ಇದುವರೆವಿಗೂ ನಿವೇಶನವಿಲ್ಲ. ಮನೆಗಳಿದ್ದರು ಸರಿಯಾದ ಹಕ್ಕುಪತ್ರಗಳಿಲ್ಲ. ಜನಪ್ರತಿನಿದಿಗಳು, ಅಧಿಕಾರಿಗಳು ಬರ್ತಾರೆ ಹೋಗ್ತಾರೆ ಬಿಟ್ರೆ ಅವರಿಂದ ನಮ್ಗೆ ಏನು ಉಪಯೋಗವಿಲ್ಲ. ನಾವು ಏನು ಮಾಡೋದು ನೀವೆ ಹೇಳಿ ಅಂತ ಜನ ತಮ್ಮ ಅಳಲನ್ನು ತೋಡಿಕೊಂಡರು.
ನಮ್ಮ ಏರಿಯಾದಲ್ಲಿ ಸುಮಾರು 5000 ಸಾವಿರ ಜನಸಂಖ್ಯೆ ಇದೆ. ಇಡೀ ರಾಜ್ಯದಲ್ಲಿಯೇ ಇದು 2 ನೇ ಅತೀ ದೊಡ್ಡ ಸ್ಲಂ ಆಗಿದೆ. ಇಲ್ಲಿ ಇನ್ನು ಕೂಡ ಹಕ್ಕುಪತ್ರ, ದಾಖಲೆಗಳೆಲ್ಲವು ಪೂರ್ವಿಕರ ಹೆಸರಲ್ಲಿಯೇ ಇವೇ. ಇಲ್ಲಿ ಹೆಚ್ಚಿನದಾಗಿ ಕೂಡು ಕುಟುಂಬಗಳೇ ವಾಸ ಮಾಡ್ತಿರೋದ್ರಿಂದ ನಿವೇಶನ ಹಂಚಿಕೆಯ ಸಮಸ್ಯೆ ಕೂಡ ಇದೆ. ಕೆಲವು ಮನೆಗಳು ಪೂರ್ವಿಕ ಹೆಸರಲ್ಲಿಯೇ ಇಂದಿಗೂ ಮುಂದುವರೆಯುತ್ತಿವೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ನಮ್ಮ ಜನರಿಗೆ ಹಕ್ಕುಪತ್ರ ವಿತರಿಸುವ ಕೆಲಸವಾಗಬೇಕಿದೆ. ಇತ್ತೀಚಿಗೆ ಜನಸ್ಪಂದನ ಕಾರ್ಯಕ್ರಮ ಮಾಡಿ ಹೋದ್ರು ಆದ್ರೆ ಪ್ರಯೋಜನವಾಗಿಲ್ಲ ಅಂತ ಸ್ಲಂ ಸಮಿತಿಯ ಕಾರ್ಯಕರ್ತೆ ಅನುಪಮಾ ಹೇಳಿದರು.
ಒಂದು ಕಡೆ ಜನಪ್ರತಿನಿಧಿಗಳು ಸ್ಲಂ ಜನರನ್ನ ಓಟ್ ಬ್ಯಾಂಕಾಗಿ ಮಾಡಿಕೊಂಡ್ರೆ ಮತ್ತೊಂದೆಡೆ ಅಧಿಕಾರಿಗಳು ಹಣ ಲೂಟಿ ಮಾಡಲು ಬಳಸಿಕೊಳ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ಸ್ಲಂ ಜನರಿಗೆ ಸಿಗಬೇಕಾದಂತಹ ಅದೆಷ್ಟೊ ಯೋಜನೆಗಳು ತುಕ್ಕು ಹಿಡಿಯುತ್ತಿವೆ. ಇನ್ನಾದ್ರು ತುಮಕೂರಿನ ಜನಪ್ರತಿನಿಧಿಗಳು, ಅಧಿಕಾರಿಗಳು ಎನ್.ಆರ್.ಕಾಲೋನಿಯ ಜನರ ನೋವಿಗೆ ಸ್ಪಂಧಿಸಬೇಕಿದೆ. ಕೇವಲ ಜನಸ್ಪಂದನ ಕಾರ್ಯಕ್ರಮಗಳನ್ನು ಮಾಡಿ ಸುಮ್ಮನಾಗುವುದರ ಬದಲು ಅವರ ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಎನ್.ಆರ್. ಕಾಲೋನಿ ಜನರ ಪ್ರಮುಖ ಬೇಡಿಕೆಯಾದ ಹಕ್ಕುಪತ್ರ, ಮೂಲಭೂತ ಸೌಕರ್ಯ ಒದಗಿಸಬೇಕಿದೆ.