ಪ್ಲೇಟ್ಲೆಟ್ಸ್ ಹೆಚ್ಚಿಸಲು ಯಾವ ಯಾವ ಹಣ್ಣನ್ನು ಸೇವನೆ ಮಾಡಬೇಕು..?

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಡೆಂಗ್ಯೂ ಎಂಬುದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಇದು ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ನಿರ್ಣಾಯಕ ಅಂಶವಾದ ಪ್ಲೇಟ್‌ಲೆಟ್ ಎಣಿಕೆಯಲ್ಲಿ ಇಳಿಕೆಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ಎದುರಿಸುವಾಗ, ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸುರಕ್ಷಿತ ಮತ್ತು ನೈಸರ್ಗಿಕ ವಿಧಾನಗಳನ್ನು ಅನ್ವೇಷಿಸುವುದು ಮುಖ್ಯವಾಗಿದೆ.

ಡೆಂಗ್ಯೂ ಜ್ವರಕ್ಕೆ  ಹಲವರು ಪ್ಲೇಟ್ಲೆಟ್​​ ಸಮಸ್ಯೆ ಎದುರಿಸುತ್ತಾರೆ. ಕೆಲವರು ಸಾವು ಬದುಕಿನ ನಡುವೆ ಹೋರಾಡುತ್ತಾರೆ. ಆದರೆ ಡೆಂಗ್ಯೂ ಬಂದಾಗ ಕೆಲವು ಹಣ್ಣಗಳನ್ನು ಸೇವಿಸುವುದರಿಂದ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ಯಾವ ಹಣ್ಣುಗಳನ್ನು ಸೇವಿಸಬೇಕು.  ಒಂದು ಬಾರಿ ಡೆಂಗ್ಯೂ ಜ್ವರ ಬಂದಾಗ  ಪ್ಲೇಟ್ಲೆಟ್​​ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ವೈದ್ಯರು ಕಿವಿ ಹಣ್ಣು ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಕಿವಿ ಹಣ್ಣಲ್ಲಿ ವಿಟಮಿನ್ ಸಿ ಇರುತ್ತದೆ.  ಇದು ದೇಹದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಇದಾಗಿದ್ದು, ಇದರಲ್ಲಿ ನಾರಿನಾಂಶವಿರುತ್ತದೆ.

ಡೆಂಗ್ಯೂ ರೋಗಿಗಳು ದಾಳಿಂಬೆ ಹಣ್ಣನ್ನು ಕೂಡ ಸೇವಿಯಬಹುದು. ದಾಳಿಂಬೆಯನ್ನು ಸೇವಿಸುವುದರಿಂದ ವಿಟಮಿನ್ ಸಿ ಸಿಗುತ್ತದೆ. ಮತ್ತು ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಿಸುತ್ತದೆ. ದಾಳಿಂಬೆ ದೇಹದಲ್ಲಿ ರಕ್ತ ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.

ಪಪ್ಪಾಯಿ ಹಣ್ಣು ಡೆಂಗ್ಯೂ ರೋಗಿಗಳು ಸೇವಿಸಿದರೆ ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಇರುತ್ತದೆ. ಕೆಲವರು ಪಪ್ಪಾಯಿ ಎಲೆಯ ರಸವನ್ನು ಡೆಂಗ್ಯೂ ರೋಗಿಗಳು ಸೇವಿಸಿ ಎಂದು ಸಲಹೆ ನೀಡುತ್ತಾರೆ. ಈ ಹಣ್ಣಿನಲ್ಲಿ ನಾರಿನಂಶ ಜಾಸ್ತಿಯಿರುವ ಕಾರಣ ಡೆಂಗ್ಯೂ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಸೇಬು ಎಲ್ಲಾ ದೃಷ್ಟಿಯಲ್ಲೂ ದೇಹಕ್ಕೆ ಉತ್ತಮ. ಸೇಬು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವ ಕಾರಣ ವೇಗವಾಗಿ ಜ್ವರದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಎಳನೀರು ಲವಣಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಡೆಂಗ್ಯೂ ರೋಗಿಗಳು ಸೇವಿಸಸುವುದು ಉತ್ತಮ . ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಸ್ಥಿರವಾಗಿರಿಸುವ ಮೂಲಕ ದೇಹಕ್ಕೆ ತೇವಾಂಶ ನೀಡುವಲ್ಲಿ ಸಹಾಯಕವಾಗಿದೆ. ಇದು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ . ನೀವು ಚೇತರಿಸಿಕೊಳ್ಳುತ್ತಿರುವಾಗ ಪ್ರತಿದಿನ ಎರಡು ಗ್ಲಾಸ್ ಎಳನೀರು ಕುಡಿಯುವುದು ಅತ್ಯಗತ್ಯ.

Author:

...
Editor

ManyaSoft Admin

Ads in Post
share
No Reviews