KALABURGI : ಮಹಿಳೆಯ ಬರ್ಬರ ಕೊಲೆ | ಬೆಚ್ಚಿಬಿದ್ದ ಸಾರ್ವಜನಿಕರು

KALABURGI : ಚಾಕುವಿನಿಂದ ಇರಿದು ಮಹಿಳೆಯೋರ್ವಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಶಹಾಬಜಾರ್ ಪ್ರದೇಶದ ಲಂಗೋಟಿ ಪೀರ್ ದರ್ಗಾದ ಸಮೀಪ ನಡೆದಿದೆ. ಮೃತ ಮಹಿಳೆಯನ್ನು 33 ವರ್ಷದ ರೂಪಾ ವೆಂಕಟೇಶ್ ಎನ್ನಲಾಗಿದೆ.

ಇನ್ನು ಮೃತ ಮಹಿಳೆ ಕಲಬರುಗಿ ಜಿಲ್ಲೆಯ ಕಲ್ಲಹಂಗಾರಗಾ ಗ್ರಾಮದವರಾಗಿದ್ದು, ಶಹಬಜಾರ್ ಬಡಾವಣೆಯಲ್ಲಿ ಪತಿಯೊಂದಿಗೆ ವಾಸವಿದ್ದರು. ಮಹಿಳೆ ಬೆಳಗ್ಗೆ ಎಂದಿನಂತೆ ಸಮೋಸ ಮಾಡಲು ತೆರಳುವ ವೇಳೆ ಕೊಲೆ ನಡೆದಿದೆ ಎನ್ನಲಾಗಿದೆ.  10 ವರ್ಷಗಳ ಹಿಂದೆ ವೆಂಕಟೇಶ್ ಜೊತೆ ಮದುವೆಯಾಗಿದ್ದರು. ಅನೈತಿಕ ಸಂಬಂಧ ಹೊಂದಿರುವ ಕಾರಣಕ್ಕಾಗಿ ಆಕೆಯ ಪತಿ ವೆಂಕಟೇಶ್ ಹತ್ಯೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇನ್ನು ಸ್ಥಳಕ್ಕೆ ಎಸಿಪಿ ಚಂದ್ರಶೇಖರ್ ಸೇರಿ  ಹಿರಿಯ ಅಧಿಕಾರಿಗಳ  ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಈ ಸಂಬಂಧ ಕಲಬುರಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Keerthana J

Copy Editor

prajashakthi tv

share
No Reviews