ದೇಶ :
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ವಿರುದ್ಧವಾಗಿ ಭಾರತ ಪಾಕಿಸ್ತಾನ ಯುದ್ಧಕ್ಕೆ ಮುಂದಾಗಿತ್ತು. ಪಾಕ್‌ನ ಉಗ್ರರ ಅಡಗು ತಾಣಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿತ್ತು. ಪಾಕಿಸ್ತಾನದ ಸಂಸತ್ ನಲ್ಲಿಯೇ ಕದನ ಬೇಡ ಎಂದು ಸಂಸದರು ಧ್ವನಿ ಎತ್ತಿದ್ದರು. ಭಾರತದ ಸೈನಿಕರ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ವನ್ನು ಘೋಷಿಸಿತ್ತು. ಇದಕ್ಕೆ ದೇಶವು ಮೂರು ಪಡೆಯ ಮುಖ್ಯಸ್ಥರು ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕೂಡ ಸುದ್ದಿ ಗೋಷ್ಠಿಯಲ್ಲಿ ಸಮ್ಮತಿ ಸೂಚಿಸಿದ್ರು. ಇಂದು ಕದನ ವಿರಾಮ ಕುರಿತು ಭಾರತ ಮತ್ತು ಪಾಕ್ ನಡುವೆ ಫೈನಲ್ ಮಾತುಕತೆ ನಡೆಯಲಿದೆ.
ಹೌದು ಶನಿವಾರ ಕದಮ ವಿರಾಮಕ್ಕೆ ಎರಡು ದೇಶಗಳು ಓಕೆ ಅಂದಿದ್ದವು. ಆದ್ರೆ ಆದಾದ ಬಳಿಕ ಮತ್ತೆ ಪಾಕ್ ದಾಳಿಗೆ ಮುಂದಾಗಿತ್ತು. ಗಡಿಯಲ್ಲಿ ನಿಯಮ ಉಲ್ಲಂಘಿಸುತ್ತಿದ್ದು, ಇದರ ವಿರುದ್ಧ ಭೀಕರ ತಿರುಗೇಟು ನೀಡಲು ಸೇನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಮಾಧಿಕಾರ ನೀಡಿದ್ರು. ಇನ್ನು ಪಾಕಿಸ್ತಾನದ ವರ್ತನೆಯ ಬಗ್ಗೆ ಭಾರತೀಯ ನೌಕಾ ಕಾರ್ಯಾಚರಣೆಯ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಹೇಳೋದು ಹೀಗೆ. ಆಪರೇಷನ್ ಸಿಂಧೂರ ವೇಳೆ ಮೇ 9 ರಂದು ಪಾಕಿಸ್ತಾನದ ಕರಾಚಿ ಬಂದರು ಸೇರಿದಂತೆ ಅವರ ನೌಕಾ ಮತ್ತು ಭೂ ಸೇನಾ ಶಿಬಿರಗಳ ಮೇಲೆ ಭಾರತೀಯ ನೌಕಾ ಪಡೆ ದಾಳಿ ಮಾಡಿ, ಧ್ವಂಸಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಭಯೋತ್ಪಾ ದಕ ದಾಳಿಯ 96 ಗಂಟೆಗಳ ಒಳಗೆ ನಾವು ಅರಬ್ಬಿ ಸಮುದ್ರದಲ್ಲಿ ನಮ್ಮ ಶಸ್ತ್ರಾಸ್ತ್ರಗಳು ಮತ್ತು ಯುದ್ಧನೌಕೆಗಳ ಪರೀಕ್ಷಿಸಿದ್ದೆವು ಎಂದಿದ್ದಾರೆ.
ಇನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಮೂರು ಪಡೆಗಳ ಕಮಾಂಡರ್ಸ್ಗಳು ಜಂಟಿಗೋಷ್ಠಿ ನಡೆಸಿದವು. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿ, ಯುದ್ಧದಲ್ಲಿ 35-40 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಯುದ್ಧದಲ್ಲಿ ಭಾರತ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು.
ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕುರಿತಾಗಿ ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ಸೇನಾ ಮುಖ್ಯಸ್ಥರು, ವಿದೇಶಾಂಗ ಕಾರ್ಯದರ್ಶಿಗಳು ಇತರರು ಪಾಲ್ಗೊಳ್ಳಿದ್ದಾರೆ. ಇನ್ನು ಇಂದಿನ ಸಂಧಾನ ಸಭೆಯಲ್ಲಿ ಮೋದಿ ಅಂಡ್ ಟೀಂ ದೊಡ್ಡಮಟ್ಟದ ಬೇಡಿಕೆಗಳನ್ನೇ ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಆದ್ರೆ ಇಂದು ಸಂಧಾನ ಯಾವ ಮಟ್ಟಕ್ಕೆ ತಲುಪಲಿದೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಎರಡು ದೇಶಗಳು ಸಂಪೂರ್ಣವಾಗಿ ಕದನವನ್ನು ನಿಲ್ಲುಸುತ್ತವೆಯೋ ಇಲ್ಲ ಮುಂದುವರೆಸುತ್ತವೆಯೋ ಅನ್ನೋದನ್ನ ಕಾದು ನೋಡಬೇಕಿದೆ.