UN : ಪಾಕ್, ಭಾರತ ನಡುವೆ ಯುದ್ಧ | ವಿಶ್ವಸಂಸ್ಥೆ ಹೇಳಿದ್ದೇನು ...?

UN :

ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿ ಭಾರತ ಪಾಕಿಸ್ತಾನಕ್ಕೆ ಒಂದರ ಮೇಲೆ ಒಂದು ಪೆಟ್ಟು ನೀಡ್ತಿದೆ. ಪಾಕ್‌ ಮೇಲೆ ಪ್ರಧಾನಿ ಮೋದಿ ರಾಜತಾಂತ್ರಿಕ ಯುದ್ಧ ಶುರು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪಾಕ್‌ನಲ್ಲಿ ಯುಟ್ಯೂಬ್‌, ರೇಡಿಯೋ, ನೀರಿನ ಮೂಲಗಳನ್ನು ಕಂಪ್ಲೀಟ್‌ ಬಂದ್‌ ಮಾಡಿದೆ. ಇದರಿಂದ ಕೋಪಗೊಂಡಿರುವ ಪಾಕ್‌ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ದಾಳಿ ಮೂಲಕ ಕದನ ವಿರಾಮ ಉಲ್ಲಂಘಿಸುತ್ತಿದೆ. ಇದೀಗ ಎರಡು ದೇಶಗಳ ನಡುವೆ ಯುದ್ಧ ತಡೆಯಲು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌ ಮಾತನಾಡಿ, ಇಂತಹ ಉದ್ವಿಗ್ನತೆಯ ಸಂದರ್ಭದಲ್ಲಿ ಉಭಯ ದೇಶಗಳ ಸೇನೆಗಳು ಮುಖಾಮುಖಿ ಆಗುವುದನ್ನು ತಪ್ಪಿಸುವುದು ಅತ್ಯಗತ್ಯವಿದೆ. ಪರಮಾಣು ಸಶಸ್ತ್ರಗಳನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನ ದೇಶಗಳು ಈ ಸಮಯದಲ್ಲಿ ಸಂಯಮ ಕಾಯ್ದುಕೊಳ್ಳುವ ಮೂಲಕ ಯುದ್ದ ಹಂಚಿನಿಂದ ಹಿಂದೆ ಸರಿಯಬೇಕು ಎಂದು ಸಲಹೆ ನೀಡಿದ್ದಾರೆ.

ಏಪ್ರಿಲ್‌ 22 ರಂದು ಕಾಶ್ಮೀರದಲ್ಲಿ ಪಹಲ್ಗಾಮ್‌ ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಈ ಕಾರಣಕ್ಕೆ ಎರಡು ದೇಶಗಳ ನಡುವೆ ಸಂಬಂಧ ಸಾಕಷ್ಟು ಕೆಟ್ಟಿದೆ. ಈ ಕೃತ್ಯ ಎಸಗಿದವರನ್ನು ಘಟನೆಗೆ ಕಾರಣರಾದವರನ್ನು ಕಾನೂನುಬದ್ಧ ವಿಧಾನಗಳ ಮೂಲಕ ಕಟಕಟೆಗೆ ತಂದು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews