ಮದುವೆ ವಾರ್ಷಿಕೋತ್ಸವ ದಿನದಂದೇ ಸಿಂಹ - ಪ್ರಿಯನ ಬಾಳಲ್ಲಿ ಮರಿ ಸಿಂಹ ಎಂಟ್ರಿ..!

ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ದಂಪತಿ
ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ದಂಪತಿ
ಸಿನಿಮಾ-ಟಿವಿ

Vasishta Simha Haripriya :

ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದಾದ ಹರಿಪ್ರಿಯಾ - ವಸಿಷ್ಠ ಸಿಂಹ ಪಾಲಿಗೆ ಇಂದು ಡಬಲ್ ಸಂಭ್ರಮ. ವಿವಾಹ ವಾರ್ಷಿಕೋತ್ಸವದ ದಿನವೇ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 2ನೇ ವಾರ್ಷಿಕೋತ್ಸವದ ದಿನದಂದೇ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಬಾಳಲ್ಲಿ ಮರಿ ಸಿಂಹನ ಆಗಮನವಾಗಿದೆ.

ಇತ್ತೀಚೆಗೆ ನಟಿಯ ಸೀಮಂತ ಸಮಾರಂಭವೂ ನಡೆದಿತ್ತು. ಈ ವೇಳೆಯೂ ಸ್ಯಾಂಡಲ್ ವುಡ್ ಚಿತ್ರರಂಗದವರು, ಕುಟುಂಬಸ್ಥರು ಸೇರಿ ಅನೇಕರು ಶುಭ ಕೋರಿದ್ದರು. ಹಾಗೂ ಹಲವರು ಸಮಾರಂಭದಲ್ಲಿ ಭಾಗಿಯಾಗಿ ಮುದ್ದಾದ ಜೋಡಿಗೆ ಹಾರೈಸಿದ್ದರು. ಸ್ಯಾಂಡಲ್ ವುಡ್ ಮುದ್ದಾದ ಜೋಡಿ ಹರಿಪ್ರಿಯಾ - ವಸಿಷ್ಠ ಸಿಂಹ ತಾಯಿ ಹಾಗು ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಮದುವೆ ವಾರ್ಷಿಕೋತ್ಸವದಂದೇ ಮಗು ಹುಟ್ಟಿದ್ದು, ಕುಟುಂಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

2023 ಜನವರಿ 26 ರಂದು ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯಾಗಿದ್ದರು. 2025 ರ ಅದೇ ದಿನ ಹೆರಿಗೆಗೆಂದು  ಬೆಂಗಳೂರಿನ ಅಕ್ಷಯ್ ಆಸ್ಪತ್ರೆಗೆ ನಟಿ ದಾಖಲಾಗಿದ್ದರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ವಸಿಷ್ಠ ಸಿಂಹ ಹರಿಪ್ರಿಯಾಗೆ ಗಂಡು ಮಗು ಜನನವಾಗಿದ್ದು, ಎರಡೂ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ನಟ ವಸಿಷ್ಠ ಸಿಂಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮದುವೆ ವಾರ್ಷಿಕೋತ್ಸವದ ದಿನ ಗಂಡು ಮಗು ಹುಟ್ಟಿರುವ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ. ಅಲ್ಲದೆ, ಸಿಂಹ - ಸಿಂಹಿಣಿಯ ಜತೆಗೆ ಮರಿ ಸಿಂಹನ ಆಗಮನವಾಗಿದೆ ಅನ್ನುವ ರೀತಿಯಲ್ಲಿ ಸಿಂಹಗಳ ಫೋಟೋ ಹಂಚಿಕೊಂಡಿದ್ದಾರೆ. 

ವಿವಾಹ ವಾರ್ಷಿಕೋತ್ಸವದ ಬಗ್ಗೆಯೂ ನಟ ವಸಿಷ್ಠ ಸಿಂಹ ವಿಡಿಯೋ ಹಂಚಿಕೊಂಡಿದ್ದು, ಜತೆಗೆ ವಾರ್ಷಿಕೋತ್ಸವಕ್ಕೆ ಹಾಗೂ ಮಗು ಹುಟ್ಟಿರುವ ಬಗ್ಗೆ ಶುಭ ಕೋರುತ್ತಿರುವವರ ಪೋಸ್ಟ್ ಗಳನ್ನು ರೀ ಪೋಸ್ಟ್ ಮಾಡಿ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹಗೆ ಅನೇಕರು ಶುಭ ಹಾರೈಸುತ್ತಿದ್ದಾರೆ. ಇಬ್ಬರ ಅಭಿಮಾನಿಗಳು ಸಹ ಸಂಭ್ರಮ ವ್ಯಕ್ತಪಡಿಸಿದ್ದು, ಮರಿ ಸಿಂಹನ ಆಗಮನಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

 

Author:

share
No Reviews