SPORTS: RCB ನೂತನ ಕ್ಯಾಪ್ಟನ್ಗೆ ವಿರಾಟ್ ಕೊಹ್ಲಿ ಕಿವಿಮಾತು

ವಿರಾಟ್‌ ಕೊಹ್ಲಿ ಮ್ತತು ರಜತ್‌ ಪಾಟೀದಾರ್
ವಿರಾಟ್‌ ಕೊಹ್ಲಿ ಮ್ತತು ರಜತ್‌ ಪಾಟೀದಾರ್
ಕ್ರಿಕೆಟ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ  2025ರ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಪ್ರತಿದಿನವೂ ಅಭಿಮಾನಿಗಳಿಗೆ ಉತ್ಸಾಹ ಹೆಚ್ಚಾಗುತ್ತಿದೆ.  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ರಜತ್‌ ಪಾಟೀದಾರ್‌ ಅವರನ್ನು Rcb ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿದೆ. Rcb ಕ್ಯಾಪ್ಟನ್ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಹೆಸರೇ ಕೇಳಿ ಬಂದಿತ್ತು. ಆದರೆ ವಿರಾಟ್ ಆಪ್ತನಿಗೆ ಪಟ್ಟಾಭಿಷೇಕ ಮಾಡಿ ತಂಡ ಹಾಗೂ ಫ್ರಾಂಚೈಸಿಯ ಗೆಲುವಿಗೆ ಪಣ ತೊಟ್ಟಿದ್ದಾರೆ.

ಈ ಮೂಲಕ ಭವಿಷ್ಯದಲ್ಲಿ ರಜತ್‌ ಪಾಟೀದಾರ್‌ Rcb ಪರ ಇನ್ನು ಕೆಲ ವರ್ಷಗಳ ಕಾಲ ಆಡುವ ಕಾರಣ ಯುವ ನಾಯಕನ ಮೊರೆ ಹೋಗಿದೆ. ಈ ಹಿನ್ನಲೆಯಲ್ಲಿ ರಜತ್‌ ಪಾಟೀದಾರ್‌ Rcb  ತಂಡದ 8ನೇ ನಾಯಕನಾಗಿ ಆಯ್ಕೆಯಾಗಿದ್ದು, ಯುವ ಆಟಗಾರನ ಮೇಲೆ ಕಪ್‌ ಗೆಲ್ಲಿಸುವ ಮಹತ್ವದ ಜವಾಬ್ದಾರಿ ಇದೆ. ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಪಾಟೀದಾರ್‌ ಅವರಿಗೆ ೧೧ ಕೋಟಿ ಕೊಟ್ಟು ಉಳಿಸಿಕೊಂಡಿದ್ದ, Rcb  ಇದೀಗ ಮಹತ್ವದ ಪಾತ್ರ ನೀಡಿದೆ.

ರಜತ್ ಪಾಟಿದಾರ್ Rcb ನಾಯಕನಾಗಿ ಘೋಷಣೆಯಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿ ಕ್ಯಾಪ್ಟನ್ ರಜತ್ ಪಾಟೀದಾರ್ ಆಯ್ಕೆಯನ್ನು ಸಮರ್ಥಿಸಿಕೊಂಡು ತುಂಬು ಹೃದಯದಿಂದ ಹಾರೈಸಿದ್ದಾರೆ. ವಿರಾಟ್ ಕೊಹ್ಲಿ, ಮೊದಲಿಗೆ ರಜತ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯಲ್ಲೇ ರಜತ್‌ ಪಾಟೀದಾರ್ ಬೆಳವಣಿಗೆ ಕಂಡಿದ್ದೇನೆ. ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

ರಜತ್ ಪಾಟೀದಾರ್ ಅನ್ನು ನಾನು ಬಹಳ ವರ್ಷಗಳಿಂದಲೂ ನೋಡಿದ್ದೇನೆ. ಭಾರತ ತಂಡಕ್ಕಾಗಿ ಆಟ ಆಡುವಾಗಲೂ ಗಮನಿಸಿದ್ದೇನೆ. ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬಲ್ಲ ಚತುರತೆ ರಜತ್ ಪಾಟೀದಾರ್ ಬಳಿ ಇದೆ. ಆರ್‌ಸಿಬಿ ತಂಡ ಹಾಗೂ ಫ್ರಾಂಚೈಸಿ ಬಹಳ ಮುಖ್ಯವಾದದ್ದು. ರಜತ್ ಪಾಟೀದಾರ್‌ಗೆ ನಾನು ಶುಭಾಶಯ ತಿಳಿಸುತ್ತಾ ಆರ್‌ಸಿಬಿ ಅಭಿಮಾನಿಗಳು ಹೊಸ ಕ್ಯಾಪ್ಟನ್‌ಗೆ ಬೆಂಬಲಿಸಿ ಎಂದು ವಿರಾಟ್ ಕೊಹ್ಲಿ ಕೇಳಿಕೊಂಡಿದ್ದಾರೆ.

 

 

 

 

Author:

...
Sub Editor

ManyaSoft Admin

Ads in Post
share
No Reviews