ಗುಡ್‌ ನ್ಯೂಸ್‌ ಕೊಟ್ಟ ಬಿಗ್‌ಬಾಸ್‌ ಖ್ಯಾತಿಯ ವಿನಯ್ ಗೌಡ- ಮೋಕ್ಷಿತಾ ಪೈ

ಸಿನಿಮಾ-ಟಿವಿ : ಬಿಗ್ ಬಾಸ್ ಕನ್ನಡ 11 ನಂತರ ಮತ್ತೆ ಕ್ಯಾಮೆರಾ ಮುಂದೆ ಮೋಕ್ಷಿತಾ ಪೈ ಮಿಂಚಲು ಸಜ್ಜಾಗಿದ್ದಾರೆ. ಈಗಿನ ಸುದ್ದಿ ಪ್ರಕಾರ, ಬಿಗ್ ಬಾಸ್ ಕನ್ನಡ 10 ರ ಖ್ಯಾತಿಯ ವಿನಯ್ ಗೌಡ ಅವರೊಂದಿಗೆ ಮೋಕ್ಷಿತಾ ಪೈ ಹೊಸ ವೆಬ್ ಸೀರೀಸ್‌ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ವೆಬ್ ಸೀರೀಸ್‌ನ ಶೂಟಿಂಗ್ ಸಂಬಂಧಿಸಿದ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಕೆರಳಿಸಿದೆ.

ಈ ಪ್ರಾಜೆಕ್ಟ್‌ನ್ನು ಧೃತಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದ್ದು, ಜೀ5 (Zee5) ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ. ಬಿಗ್ ಬಾಸ್ ನಂತರ ಮೋಕ್ಷಿತಾ ಪಾಲ್ಗೊಳ್ಳುತ್ತಿರುವ ಇದು ಅವರ ಮೊದಲ ಮಹತ್ವದ ಪ್ರಾಜೆಕ್ಟ್ ಆಗಿದ್ದು, ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದರ ಜೊತೆಗೆ, ಮೋಕ್ಷಿತಾ ಪೈ ಮಿಡಲ್ ಕ್ಲಾಸ್ ರಾಮಾಯಣ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್‌ಗೆ ನಾಯಕಿಯಾಗಿ grand entry ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಒಂದು ಕಪ್ಪು ಹುಡುಗಿಯ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರವೇ ಚಿತ್ರದ ಮುಖ್ಯ ಆಕರ್ಷಣೆಯಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರ ಬಿಡುಗಡೆ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

 

Author:

...
Keerthana J

Copy Editor

prajashakthi tv

share
No Reviews