ಬೆಂಗಳೂರು : ಜೂನ್‌ 1 ರಿಂದ ವಿಧಾನಸೌಧ ಪ್ರವಾಸಕ್ಕೆ ಸಾರ್ವಜನಿಕರಿಗೆ ಅವಕಾಶ

ಬೆಂಗಳೂರು: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯದ ಶ್ರೇಷ್ಠ ಆಡಳಿತ ಭವನವಾದ ವಿಧಾನಸೌಧ ತನ್ನ ಬಾಗಿಲುಗಳನ್ನು ಸಾರ್ವಜನಿಕರಿಗೆ ತೆರೆಯುತ್ತಿದೆ. ಇಂದಿನಿಂದ ಸಾರ್ವಜನಿಕರಿಗೆ ಗೈಡೆಡ್ ಟೂರ್ ಮೂಲಕ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ದೊರೆಯಲಿದೆ.

ಈ ಭವ್ಯ ಕಟ್ಟಡದ ಆಕರ್ಷಕ ಶಿಲ್ಪಕಲೆ, ಶಾಸನ ಸಭಾಂಗಣಗಳು ಹಾಗೂ ಒಳಾಂಗಣ ವಾಸ್ತುಶಿಲ್ಪವನ್ನು ನೆರೆದಿದು, ಜನಸಾಮಾನ್ಯರು ಈಗ ನೇರವಾಗಿ ವೀಕ್ಷಿಸಬಹುದಾಗಿದೆ. ಜೂನ್ 1ರಿಂದ ಟೂರ್‌ ಗೈಡ್ ಪ್ರಾರಂಭವಾಗಲಿದ್ದು, ಇದರೊಂದಿಗೆ ಪ್ರವೇಶ ಶುಲ್ಕ ಹಾಗೂ ಸಮಯ ನಿಯಮಗಳನ್ನು ಸರ್ಕಾರ ಪ್ರಕಟಿಸಿದೆ.

ಈ ಗೈಡೆಡ್ ಟೂರ್‌ನ ವಿಶೇಷತೆ ಎಂದರೆ – ಶಾಸನಸಭೆ ಸಭಾಂಗಣ, ವಿಧಾನ ಪರಿಷತ್, ಹಾಗೂ ಇತರೆ ಪ್ರಮುಖ ಭಾಗಗಳನ್ನು ಸಮರ್ಪಕ ಮಾರ್ಗದರ್ಶನದೊಂದಿಗೆ ವೀಕ್ಷಿಸಲು ಅವಕಾಶ ಒದಗಿಸಲಾಗಿದೆ. ಇದು ರಾಜ್ಯದ ಆಡಳಿತ ಪರಂಪರೆ, ರಾಜಕೀಯ ಪರಿಕಲ್ಪನೆಗಳ ಅರಿವಿಗೆ ಒಳ್ಳೆಯ ವೇದಿಕೆಯಾಗಲಿದೆ.

ವಿಧಾನಸೌಧ ಪ್ರವಾಸಕ್ಕಾಗಿ KSTDC ಆನ್‌ಲೈನ್ ಮೂಲಕ ಬುಕಿಂಗ್ ವ್ಯವಸ್ಥೆ ಹಾಗೂ ಸ್ಥಳದಲ್ಲಿಯ ಟಿಕೆಟ್ ವ್ಯವಸ್ಥೆ ಇದ್ದು, ಪ್ರವಾಸಿಗರಿಗೆ ಕಟ್ಟುನಿಟ್ಟಾದ ಭದ್ರತಾ ತಪಾಸಣೆಯ ನಂತರ ಪ್ರವೇಶ ನೀಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಗೈಡ್ ಮಾಹಿತಿ ನೀಡುವರು. ವಿಧಾನಸೌಧದ ಗೇಟ್ ನಂಬರ್ 3ರಿಂದ ಪ್ರವೇಶ ಕಲ್ಪಿಸಲಾಗುವುದು. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ.

Author:

...
Sushmitha N

Copy Editor

prajashakthi tv

share
No Reviews