ಪಾವಗಡ : ಪಾವಗಡದಲ್ಲಿ ಪುರಸಭೆ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿತ್ತು. ಇದರಿಂದ ಪಕ್ಕದಲ್ಲಿಯೇ ಇದ್ದಂತಹ ಇಂದಿರಾ ಕ್ಯಾಂಟೀನ್ ಗೆ ಊಟಕ್ಕೆ ಬರುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು. ರೋಗಗಳ ತಾಣವಾಗಿ ಮಾರ್ಪಾಡುತ್ತಿದ್ದ ತರಕಾರಿ ಮಾರುಕಟ್ಟೆ ಕುರಿತು ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರ ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೆ ಎಚ್ಚೆತ್ತ ನಗರಸಭೆಯ ಅಧಿಕಾರಿಗಳು ತರಕಾರಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದ್ದಾರೆ.
ಹೌದು, ಹಲವು ದಿನಗಳಿಂದ ಪಾವಗಡದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲ. ಇದರಿಂದ ಅಲ್ಲಿನ ಜನರು ಸೇರಿದಂತೆ ಅಕ್ಕಪಕ್ಕದ ವಾಸಿಗಳು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ, ಅಧಿಕಾರಿಗಳು ಮಾತ್ರ ವಿಷಯ ತಿಳಿದಿದ್ದರೂ ಜಾಣ ಕುರುಡುತನ ತೋರುತ್ತಿದ್ದರು. ಇನ್ನು ಈ ವಿಷಯ ತಿಳಿದ ನಿಮ್ಮ ಪ್ರಜಾಶಕ್ತಿ ಟಿವಿ ತರಕಾರಿ ಮಾರುಕಟ್ಟೆಯಿಂದ ಆಗುತ್ತಿರುವ ತೊಂದರೆಗಳ ಕುರಿತಾಗಿ ಸವಿಸ್ತಾರವಾಗಿ ಸುದ್ದಿ ಬಿತ್ತರ ಮಾಡಿತ್ತು. ಇದೀಗ ಪ್ರಜಾಶಕ್ತಿ ಟಿವಿಯ ವರದಿಗೆ ಎಚ್ಚೆತ್ತ ಅಧಿಕಾರಿಗಳು ತರಕಾರಿ ಮಾರುಕಟ್ಟೆಯನ್ನು ಫುಲ್ ಕ್ಲೀನ್ ಮಾಡಿದ್ದಾರೆ. ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್.