ಉತ್ತರ ಕನ್ನಡ:
ಸುಮಾರು 4 ದಶಕಗಳಿಂದ ಅಂದರೆ, 45 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದ ದೇವಸ್ಥಾನದ ದೀಪಗಳು ನಂದಿ ಹೋಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯಲ್ಲಿರುವ ದೀಪನಾಥೇಶ್ವರ ದೇವಾಲಯದ ದೀಪಗಳು 45 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದವು.
1979 ರಲ್ಲಿ ದೈವಜ್ಞ ಶಾರದಮ್ಮ ಎಂಬವರು ದೇವಸ್ಥಾನದಲ್ಲಿ ಹಚ್ಚಿದ್ದ ದೀಪಗಳು ಇವಾಗಿದ್ದವು. ಸತತ ನಾಲ್ಕು ದಶಕದಿಂದ ಎಣ್ಣೆ ಹಾಕದೆಯೇ ಮೂರು ದೀಪಗಳು ಉರಿಯುತ್ತಿದ್ದವು. ಈ ದೀಪ ನಂದಿ ಹೋದಲ್ಲಿ ರಾಜ್ಯವಾಳುವವರಿಗೆ ಕೆಡಕು ಎಂಬ ನಂಬಿಕೆ ಇಲ್ಲಿನ ಸ್ಥಳೀಯರಲ್ಲಿದೆ. ಇದರ ಬೆನ್ನಲ್ಲಿಯೇ ರಾಜ್ಯಕ್ಕೆ ಏನಾದರೂ ಅಪಶಕುನ ಕಾದಿದ್ಯಾ ಎನ್ನುವ ಚರ್ಚೆಗಳು ಶುರುವಾಗಿದೆ.
ಮಠದ ಪ್ರವಚನದಲ್ಲಿ ನಿರತರಾಗಿದ್ದ ಶಾರದಾ ಬಾಯಿ ದೈವಜ್ಞ ಅವರು ಇಲ್ಲಿ ದೀಪ ಹಚ್ಚಿದ್ದರು. ಹಲವು ದಿನಗಳ ಕಾಲ ಎಣ್ಣೆ ಇಲ್ಲದೇ ದೀಪ ಉರಿದಾಗ ಪರೀಕ್ಷಾರ್ಥವಾಗಿ ಮತ್ತೆರಡು ದೀಪ ಹಚ್ಚಲಾಗಿತ್ತು. ಆವಾಗಲೂ ಮತ್ತೆರಡು ದೀಪಗಳು ಎಣ್ಣೆ ಇಲ್ಲದೇ ಉರಿದು ಪವಾಡ ನಡೆದಿತ್ತು. ಅಂದಿನಿಂದ ಈವರೆಗೆ ಕಲ್ಮೇಶ್ವರ ಮಠದ ಗುರುಗಳ ಆದೇಶದಂತೆ ದತ್ತಾತ್ರೇಯ ಸ್ವರೂಪವೆಂದು ದೀಪದ ಆರಾಧನೆ ಮಾಡಲಾಗಿತ್ತು. 45 ವರ್ಷಗಳ ಕಾಲ ಎಣ್ಣೆ ಇಲ್ಲದೆಯೇ ಮೂರು ದೀಪಗಳು ಉರಿಯುತ್ತಿದ್ದವು, ಆದರೆ ಈಗ ದೀಪಗಳು ಆರಿ ಹೋಗಿವೆ.