ಉತ್ತರ ಪ್ರದೇಶ : ಪೊಲೀಸ್ ವಾಹನಕ್ಕೆ ಭೀಕರ ಅಪಘಾತ | ಆರೋಪಿ ಸೇರಿ 5 ಮಂದಿ ಪೊಲೀಸರ ಸಾವು

ಉತ್ತರಪ್ರದೇಶ :

ಪ್ರಕರಣವೊಂದರ ಸಂಬಂಧ ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್‌ ವಾಹನಕ್ಕೆ ಭೀಕರ ಅಪಘಾತ ಸಂಭವಿಸಿದ್ದು. ಸ್ಥಳದಲ್ಲಿಯೇ ಆರೋಪಿ ಸೇರಿದಂತೆ ಮೂವರು ಪೊಲೀಸರು ಸೇರಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.

ಫಿರೋಜಾಬಾದ್ ಪೊಲೀಸರ ವಾಹನವು ಆರೋಪಿಯನ್ನು ಬುಲಂದ್‌ಶಹರ್‌ಗೆ ಕರೆದೊಯ್ಯುತ್ತಿದ್ದರು. ದಾರಿಯಲ್ಲಿ ಪೊಲೀಸ್‌ ವಾಹನವು ಮುಂದೆ ಹೋಗುತ್ತಿದ್ದ ಟ್ಯಾಂಕರ್‌ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಮೂವರು ಪೊಲೀಸರು ಸೇರಿದಂತೆ ವಾಹನ ಚಾಲಕ ಮತ್ತು ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಪೊಲೀಸ್‌ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫಿರೋಜಾಬಾದ್ ಪೊಲೀಸರ ತಂಡವು ಆರೋಪಿ ಗುಲ್ಶನ್ ಎಂಬಾತನ್ನು ಜೈಲಿನಿಂದ ಬುಲಂದ್‌ಶಹರ್‌ಗೆ ಸರ್ಕಾರಿ ವಾಹನದಲ್ಲಿ ಕರೆದೊಯ್ಯುತ್ತಿದ್ದರು. ವ್ಯಾನ್‌ ನಲ್ಲಿ ಒಟ್ಟು 6 ಜನರಿದ್ದರು, ಇಲ್ಲಿನ ಲೋಧಾ ಪ್ರದೇಶದ ಚಿಕಾವತಿ ಬಳಿಯ ಹೆದ್ದಾರಿಯಲ್ಲಿ ಪೊಲೀಸ್‌ ವಾಹನ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್‌ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ಇತ್ತ ಅಪಘಾತದಲ್ಲಿ ಪೊಲೀಸ್ ವ್ಯಾನ್‌ನಲ್ಲಿದ್ದ ಎಲ್ಲರೂ ಗಂಭೀರವಾಗಿ ಗಾಯಗೊಂಡರು, ಸಬ್‌ ಇನ್ಸ್‌ಪೆಕ್ಟರ್‌ ರಾಮ್‌ ಸಜೀವನ್‌, ಹೆಡ್‌ ಕಾನ್ಸ್‌ ಟೇಬಲ್‌ ರಘುವೀರ್‌ ಸಿಂಗ್‌ ಮತ್ತು ಚಾಲಕ ಹೆಡ್‌ ಕಾನ್ಸ್‌ ಟೇಬಲ್‌ ಚಂದ್ರಪಾಲ್‌ ಸಿಂಗ್‌ ಮತ್ತು ಆರೋಪಿ ಗುಲ್ಶನ್ ನಗರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಮಲ್ಕಾನ್‌ ಸಿಂಗ್‌, ಹೆಡ್‌ ಕಾನ್ಸ್‌ ಟೇಬಲ್‌ ಬಲ್ಬೀರ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬಲ್ಬೀರ್‌ ಸಿಂಗ್‌ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ ಎನ್ನಲಾಗಿದೆ.

 

Author:

...
Sushmitha N

Copy Editor

prajashakthi tv

share
No Reviews