upendra : ಮತ್ತೊಮ್ಮೆ ಟಾಲಿವುಡ್‌ ಗೆ ಎಂಟ್ರಿ ಕೊಟ್ಟ ರಿಯಲ್‌ ಸ್ಟಾರ್‌ ಉಪೇಂದ್ರ

ಸಿನಿಮಾ :

ಕನ್ನಡದ ರಿಯಲ್‌ ಸ್ಟಾರ್ ಉಪೇಂದ್ರ ಅವರು ಮತ್ತೊಮ್ಮೆ ಟಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಹೌದು ರಾಮ್ ಪೋತಿನೇನಿ ಅಭಿನಯದ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿದ್ದಾರೆ. ಪುಷ್ಪ 2 ಸಿನಿಮಾ ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್‌ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ ಈ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ಸಖತ್ ಸ್ಟೈಲಿಶ್ ರೂಪದಲ್ಲಿಯೇ ಉಪೇಂದ್ರ ಈ ಚಿತ್ರದಲ್ಲಿ ಕಾಣಿಸಿಕೊಳ್ತಾ ಇದಾರೆ. ಉಪೇಂದ್ರ ಈ ಸಿನಿಮಾದಲ್ಲಿ ಸೂರ್ಯ ಕುಮಾರ್ ಅನ್ನೋ ರೋಲ್‌ ಮಾಡ್ತಿದ್ದಾರೆ. ರಾಮ್‌ ಪೋತಿನೇನಿ ನಟನೆಯ 22ನೇ ಸಿನಿಮಾದಲ್ಲಿ ಉಪ್ಪಿ ಪವರ್‌ಫುಲ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಉಪ್ಪಿ ಪಾತ್ರದ ಗ್ಲಿಂಪ್ಸ್‌ ಅನ್ನ ಮೇ 15 ರಂದು ರಿಲೀಸ್‌ ಮಾಡೋದಾಗಿ ಚಿತ್ರತಂಡ ತಿಳಿಸಿದೆ.  ಇನ್ನು ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಈ ಹಿಂದೆ ಕೂಡ ಉಪ್ಪಿ S/O ಸತ್ಯಮೂರ್ತಿ ಸೇರಿದಂತೆ ಟಾಸ್, ರಾ ಅನ್ನೋ ಹೆಸರಿನ ಚಿತ್ರದಲ್ಲೂ ಉಪೇಂದ್ರ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಇದೀಗ ತಮಿಳಿನ ಸೂಪರ್‌ ಸ್ಟಾರ್‌ ತಲೈವಾ ರಜನಿಕಾಂತ್‌ ಜೊತೆ ಕೂಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews