ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಮದ್ಯ ಮಳಿಗೆಗಳ ಲೈಸೆನ್ಸ್ ಶುಲ್ಕವನ್ನು ದುಪ್ಪಟ್ಟಾಗಿಸಿ ಹೊಸ ಅಧಿಸೂಚನೆ ಹೊರಡಿಸಿರುವುದು ಮದ್ಯ ಮಾರಾಟಗಾರರು ಹಾಗೂ ಬಾರ್ ಮತ್ತು ಹೋಟೇಲ್ ಉದ್ಯಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಮದ್ಯದ ಬೆಲೆ ಏರಿಕೆ ಮಾಡಿದ್ದ ಸರ್ಕಾರ, ಇದೀಗ ಮದ್ಯ ಮಳಿಗೆಗಳ ಲೈಸೆನ್ಸ್ ಶುಲ್ಕ ಹೆಚ್ಚಿಸಿ ಮತ್ತೊಂದು ಶಾಕ್ ನೀಡಿದೆ. ರಾಜ್ಯ ಸರ್ಕಾರವು ಈಗಾಗಲೇ ನೀರು, ವಿದ್ಯುತ್ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಬೆಲೆಯನ್ನು ಮೇಲಿಂದ ಮೇಲೆ ಏರಿಕೆ ಮಾಡುತ್ತಲೇ ಇದ್ದು, ಇದರಿಂದ ಸಸತವಾಗಿ ದರ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಶುಲ್ಕ ಹೆಚ್ಚಾಗಿರುವುದ್ದರಿಂದ ಮದ್ಯದ ಮಳಿಗೆಗಳನ್ನು ನಡೆಸುವುದು ಕಷ್ಟ ಎಂದು ಹಲವರು ಆಕ್ರೋಶ ವಕ್ಯಪಡಿಸಿದ್ದಾರೆ. ರಾಜ್ಯ ಸರ್ಕಾರ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ವಾರ್ಷಿಕ ಲೈಸೆನ್ಸ್ ಏರಿಕೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದಿನಕ್ಕೆ 110 ಕೋಟಿ ರೂ ವಾರ್ಷಿಕವಾಗಿ 40 ಸಾವಿರ ಕೋಟಿ ರೂ. ಸುಂಕ ಅಬಕಾರಿ ಇಲಾಖೆಗೆ ನೀಡುತ್ತೀದ್ದೇವೆ. ಇದರ ನಡುವೆ ದರ ಏರಿಕೆ ಮಾಡಿರುವುದು ಅವೈಜ್ಞಾನಿಕ ಎಂದು ಹೋಟೇಲ್ ಸಂಘದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸರ್ಕಾರದ ಈ ಹೊಸ ಅಬಕಾರಿ ನೀತಿಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.