ಶಿರಾ:
ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ. ಶಿರಾ ನಗರದ ಬಹುತೇಕ ಬಡಾವಣೆಗಳಲ್ಲಿ ಕಸದ ರಾಶಿ ತಾಂಡವ ಆಡ್ತಾ ಇದ್ದು, ಹಂದಿ, ನಾಯಿಗಳ ಆವಾಸ ಸ್ಥಾನವಾಗಿದೆ. ಚರಂಡಿಗಳು ಕಸದಿಂದ ತುಂಬಿ ಹೋಗಿದ್ದು, ಅಸ್ವಚ್ಚತೆ ತಾಂಡವ ವಾಡ್ತಾ ಇದೆ, ಇದ್ರಿಂದ ಇಡೀ ಏರಿಯಾನೇ ಗಬ್ಬೇದ್ದು ನಾರುತ್ತಿವೆ. ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅಕ್ಕ ಪಕ್ಕದ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. ಇದಕ್ಕೆ ಮೇಲಾಧಿಕಾರಿಗಳ ತಾರತಮ್ಯ ಧೋರಣೆಯೇ ಮುಖ್ಯ ಕಾರಣ ಅಂತ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇನ್ನು ನಗರದ 27 28 ನೇ ವಾರ್ಡ ವ್ಯಾಪ್ತಿಗೊಳಪಡುವ ಬಡಾವಣೆಗಳಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ಹಾಳು ಕೊಂಪೆಯಂತಾಗಿದೆ. ಈ ವಾರ್ಡ್ ಗಳಲ್ಲಿ ಸಮರ್ಪಕ ಕಸ ವಿಲೇವಾರಿ ಆಗದೇ ರಸ್ತೆ ಮೇಲೆಯೇ ಕಸ ಸುರಿತಿದ್ದು ರಸ್ತೆಯೇ ತಿಪ್ಪೆಯಾಗಿ ಪರಿವರ್ತನೆಯಾಗಿದೆ , ಅಲ್ದೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಕೆಲವು ಮನೆಗಳ ಶೌಚಾಲಯದ ನೀರು ಸರಾಗವಾಗಿ ಹರಿಯದೇ ಕಟ್ಟಿಕೊಂಡಿದ್ದು, ಸಂಜೆ ಆಗ್ತಿದಂತೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಲ್ದೇ ಈ ಪ್ರದೇಶ ಹಂದಿಗಳ ತವರೂರಾಗಿದ್ದು, ಕೊಳಚೆಗಳಲ್ಲಿ ಮಿಂದೆದ್ದು ನಾಗರೀಕರಿಗೆ ಕಿರಿಕಿರಿ ಉಂಟು ಮಾಡ್ತಿದೆ.
ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರೂ. ತಲೆಕೆಡಿಸಿಕೊಳ್ಳದೇ ಕುಂಭಕರ್ಣ ನಿದ್ರೆಯಲ್ಲಿರೋದು ವಿಪರ್ಯಾಸ, ಕೆಲವೇ ವಾರ್ಡ್‌ಗಳನ್ನು ಬಿಟ್ಟರೆ, ಇತರೆ ವಾರ್ಡ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನಾದ್ರು ನಗರಸಭೆ ಅಧಿಕಾರಿಗಳು ಎಚ್ಚೆತ್ತು ನಗರದ ಎಲ್ಲಾ ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.