ಕೊರಟಗೆರೆ :
ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತನಪಾಳ್ಯ ಕ್ರಾಸ್ ಬಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸೀರಗುಪ್ಪ ಮೂಲದ 37 ವರ್ಷದ ಮಾರಪ್ಪ, 23 ವರ್ಷದ ಶಾರುಕ್ ಮೃತ ದುರ್ದೈವಿಯಾಗಿದ್ದಾರೆ.
ಇಳಿಜಾರು ರಸ್ತೆಯಲ್ಲಿ ಬೈಕ್ ಸವಾರ ಅತೀವೇಗವಾಗಿ ಚಾಲನೆ ಮಾಡುತ್ತಿದ್ದರ ಪರಿಣಾಮ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಇನ್ನು ಬೈಕ್ ನಲ್ಲಿದ್ದ ಶಾರುಕ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಾರಪ್ಪ ಎಂಬಾತನನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತ ಕಾರ್ಮಿಕರಿಬ್ರು ವಜ್ಜನಕುರಿಕೆ ಗ್ರಾಮ ಪಂಚಾಯ್ತಿ ಜುಂಮನಹಳ್ಳಿ ಗ್ರಾಮದಲ್ಲಿ ಜೆಜೆಎಂ ಓವರ್ ಹೆಡ್ ಟ್ಯಾಂಕ್ ನಲ್ಲಿ ಕಳೆದ 2 ತಿಂಗಳಿನಿಂದ ಕೆಲಸ ಮಾಡುತ್ತಿದ್ರು. ಇನ್ನು ಜೆಜೆಎಂ ಗುತ್ತಿಗೆದಾರ ಕಾರ್ಮಿಕರಿಗೆ ಸರಿಯಾದ ಭದ್ರತೆ, ಸೌಲಭ್ಯ ಒದಗಿಸದ ಪರಿಣಾಮ ಇವ್ರು ರೇಷನ್ ಹಾಗೂ ನೀರು ತರಲು ದ್ವಿಚಕ್ರ ವಾಹನದಲ್ಲಿ ಇರಕಸಂದ್ರ ಕಾಲೋನಿಗೆ ತೆರಳುವಾಗ ಈ ಅಪಘಾತವಾಗಿದೆ ಎನ್ನಲಾಗಿದೆ. ಗುತ್ತಿಗೆದಾರನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಸ್ಥಳೀಯರು ಆಗ್ರಹಿಸ್ತಾ ಇದಾರೆ.
ಘಟನಾ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಾದರ್, ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಕೊರಟಗೆರೆ ಸಿಪಿಐ ಅನಿಲ್ , ಕೋಳಾಲ ಪಿಎಸ್ಐ ರೇಣುಕಾ ಯಾದವ್ ಭೇಟಿ ನೀಢಿ ಪರಿಶೀಲನೆ ನಡೆಸಿದ್ರು. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.