ಬೆಳಗಾವಿ:
ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್ಗೆ ಬಂದಾಗ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ಬಳಿ ಇರುವ ಸಾಯಿ ಹೋಟೆಲ್ನಲ್ಲಿ ನಡೆದಿದೆ.
ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಕೆಲಕಾಲ ತ್ವೇಷಮಯ ವಾತಾವರಣ ಉಂಟಾಗಿತ್ತು. ಏಕಾಏಕಿ ಘರ್ಷಣೆ ಉಂಟಾದ ಹಿನ್ನೆಲೆ ಸಿಬ್ಬಂದಿ ಹೋಟೆಲ್ನ ಬಾಗಿಲು ಮುಚ್ಚಿದ್ದಾರೆ. ಇನ್ನು ಈ ಘಟನೆ ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.