KICCHA SUDEEP: ಒಂದೇ ದಿನದಲ್ಲಿ ಕೀರ್ತನಾ ಅವರ ಚಿಕಿತ್ಸೆಗೆ ಲಕ್ಷ, ಲಕ್ಷ ಸಹಾಯ | ಕಿಚ್ಚ ಸುದೀಪ್ ಕರೆಗೆ ಸ್ಪಂದಿಸಿದ ಕನ್ನಡಿಗರು

ನಟ ಕಿಚ್ಚ ಸುದೀಪ್‌ ಮಾಡಿದ ಒಂದೇ ಒಂದು ಮನವಿಗೆ ಕನ್ನಡಿಗರ ಮನಸು ಕರಗಿದೆ. ಪುಟ್ಟ ಮಗು ಕೀರ್ತನಾ ಅವರ ಬದುಕಿಸೋ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಕೈ ಜೋಡಿಸಿದ್ದಾರೆ. ಸುದೀಪ್ ಅವರು ವಿಡಿಯೋ ಮಾಡಿದ ಒಂದೇ ದಿನದಲ್ಲಿ ಕೀರ್ತನಾ ಅವರ ಚಿಕಿತ್ಸೆಗೆ ಲಕ್ಷ, ಲಕ್ಷ ರೂಪಾಯಿ ಹಣದ ನೆರವು ಹರಿದು ಬಂದಿದೆ. ನಿನ್ನೆ ಬೆಳಗ್ಗೆ ಕಿಚ್ಚ ಸುದೀಪ್ ಅವರ ಫ್ಯಾನ್ಸ್‌ ಪೇಜ್‌ಗಳಲ್ಲಿ ಈ ವಿಡಿಯೋ ರಿಲೀಸ್‌ ಮಾಡಲಾಗಿತ್ತು. 

ಕಿಶೋರ್ ಮತ್ತು ಅವರ ಧರ್ಮಪತ್ನಿ ನಾಗಶ್ರೀ  ದಂಪತಿಗೆ ಒಂದು ಪುಟ್ಟ ಮಗು. 2 ವರ್ಷ 2 ತಿಂಗಳು. ಹೆಸರು ಕೀರ್ತನ ಅಂತಾ. ಬಹಳ ಸುಂದರವಾದಂತಹ ಒಂದು ಮುಗ್ಧ ಮಗು. ಈ ಮಗುವಿಗೆ ಒಂದು ರೇರ್ ಜೆನಟಿಕಲ್ ಡಿಸಾರ್ಡರ್ ಆಗಿದೆ. SMA – ಸ್ಪೈನಲ್ ಮಸ್ಕುಲರ್ ಅಟ್ರೊಫಿ ಅಂತಾ. ಬಹಳ ರೇರ್ ಜೆನಟಿಕಲ್ ಡಿಸಾರ್ಡರ್ ಇದು ಎಂದು ಮಗುವಿನ ಅನಾರೋಗ್ಯ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೊಂದು ಔಷಧಿ ಇದೆ. ಗುಣ ಆಗೋವಂತಹ ಸಾಧ್ಯತೆಗಳಿವೆ. ಆದ್ರೆ ಆ ಒಂದು ಮೆಡಿಕಲ್ ಟ್ರೀಟ್ಮೆಂಟ್ಗೆ ಬೇಕಾದಂತಹ ಒಂದು ಮೊತ್ತ ಕೇಳಿದ್ರೆ ಮೈಜುಂ ಅನಿಸುತ್ತದೆ. ಈ ಚಿಕಿತ್ಸೆಗೆ ಬೇಕಾಗಿರೋದು 16 ಕೋಟಿ ರೂಪಾಯಿ.ತಂದೆ ತಾಯಿ ಎಲ್ಲದನ್ನೂ ಬಿಟ್ಟು, ಅವರ ಆಸ್ತಿಯನ್ನೂ ಮಾರಿ, ಎಲ್ಲವನ್ನೂ ಮಾಡಿ ಈ ಮಗುವನ್ನು ಉಳಿಸಿಕೊಳ್ಳೋ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನ ಇದಕ್ಕೆ ಕೈಜೊಡಿಸಿದ್ದಾರೆ. ಸಾಕಷ್ಟು ಜನ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ನನ್ನ ಕೈಲಾದಷ್ಟು, ನಾನೇನು ಮಾಡಬಲ್ಲೆ ಅದನ್ನು ಮಾಡಿದ್ದೇನೆ. ನಾನು ಈ ವಿಡಿಯೋ ಮಾಡಲು ಮುಖ್ಯ ಕಾರಣ ಅಷ್ಟೇನೆ. ಒಂದೇ ಒಂದು ರಿಕ್ವೆಸ್ಟ್. ಇಲ್ಲಿ ಕ್ಯೂಆರ್ ಕೋಡ್ ಇದೆ. ಇದಕ್ಕೆ ನಿಮ್ಮ ಕೈಯಲ್ಲಿ ಎಷ್ಟು ಸಹಾಯ ಮಾಡಕ್ಕಾಗುತ್ತೋ ಖಂಡಿತಾ ಮಾಡಿ. ಆ ಮಗು, ನಮ್ಮ ಕೀರ್ತನಳನ್ನು ಉಳಿಸಿಕೊಳ್ಳೋ ಪ್ರಯತ್ನ ನಾವೆಲ್ಲಾ ಸೇರಿ ಮಾಡೋಣ ಎಂದು ತಿಳಿಸಿದ್ದರು.

ಕಿಚ್ಚ ಸುದೀಪ್ ಮಾಡಿದ ಈ ಮನವಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಸುದೀಪ್ ಅಭಿಮಾನಿಗಳು, ಸಹೃದಯಿ ಕನ್ನಡಿಗರು ಕೀರ್ತನಾ ಅವರಿಗೆ ಹಣದ ಸಹಾಯ ಮಾಡುತ್ತಿದ್ದಾರೆ. ಸಾವಿರಾರು ಜನ ತಮ್ಮ ಕೈಯಲ್ಲಾದಷ್ಟು ಹಣವನ್ನು ಪಾವತಿ ಮಾಡುತ್ತಿದ್ದಾರೆ.

Author:

...
Sub Editor

ManyaSoft Admin

share
No Reviews