ಪಾವಗಡ : ಬಸ್ ಗಳಿಲ್ಲದೇ ಪರದಾಡಿದ ಪ್ರಯಾಣಿಕರು

ಪಾವಗಡ :

ಯುಗಾದಿ, ರಂಜಾನ್‌ ಹಬ್ಬದ ಅಂಗವಾಗಿ ರಾಜಧಾನಿಯಲ್ಲಿ ವಾಸವಾಗಿದ್ದ ತಮ್ಮ ತಮ್ಮ ಗ್ರಾಮಕ್ಕೆ ಬಂದಿದ್ದು, ಹಬ್ಬ ಮುಗಿಸಿಕೊಂಡು ವಾಪಸ್‌ ಹೋಗುವವರಿಗೆ ಸಾರಿಗೆ ಇಲಾಖೆ ಶಾಕ್‌ ನೀಡಿದೆ, ಹೌದು ಪಾವಗಡದ ನಿವಾಸಿಗಳು ಬೆಂಗಳೂರು ಸೇರಿ ನಾನಾ ಜಿಲ್ಲೆಗಳಗೆ ಗುಳೆ ಹೋಗಿ ವಾಸವಾಗಿದ್ದವರು ಬಂದಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್‌ ತಮ್ಮ ಕಾರ್ಯಕ್ಷೇತ್ರಕ್ಕೆ ಮರಳಲು ಪಾವಗಡ ಬಸ್‌ ನಿಲ್ದಾಣಕ್ಕೆ ಬಂದವರಿಗೆ ಶಾಕ್‌ ಎದುರಾಗಿತ್ತು. ವಾಪಸ್‌ ಹೋಗಲು ಸರಿಯಾಗಿ ಬಸ್‌ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡಿದ್ದಾರೆ.

ಪಾವಗಡ ತಾಲೂಕಿನ ಸುಮಾರು 50 ರಿಂದ 60 ಸಾವಿರ ಮಂದಿ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗಿದ್ದಾರೆ. ಈ ಬಾರಿ  ಯುಗಾದಿ ರಂಜಾನ್ ಹಬ್ಬ ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಸರಣಿ ರಜೆ ಇತ್ತು. ಹೀಗಾಗಿ ದುಡಿಯಲು ಹೋದಂತಹ ಬೆಂಗಳೂರು ಇತರೆ ಗ್ರಾಮಗಳಿಂದ ಬಂದಂತಹ ಜನರಿಗೆ ಹೋಗಲು ಸಾರಿಗೆ ಬಸ್ ಇಲ್ಲದ ಹಿನ್ನೆಲೆಯಲ್ಲಿ ಪರದಾಡುವಂತಹ ದೃಶ್ಯ ಬಸ್‌ ನಿಲ್ದಾಣದಲ್ಲಿ ಕಂಡು ಬಂತು. ಇನ್ನು ಮುದುಕರು, ಮಕ್ಕಳು ಯುವಕ,ಯುತಿಯರು ಬಸ್ಸಿಗಾಗಿ ಓಡೋಡಿ ಹೋಗಿ ಸೀಟು ಹಾಕುವುದನ್ನು ಕಂಡು ಬಂದ ದೃಶ್ಯಗಳು ಪ್ರಜಾಶಕ್ತಿ ಕ್ಯಾಮೆರಾಗೆ ಕಾಣಿಸಿತು.

ಇನ್ನು ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ಯಾವುದೇ ಗಾರ್ಮೆಂಟ್ಸ್ ಆಗಲಿ ಇಂಡಸ್ಟ್ರಿಯಲ್ ಏರಿಯಾ ಆಗಲಿ ಇಲ್ಲದ ಕಾರಣ ಸಾವಿರಾರು ಮಂದಿ ಗುಳೆ ಹೋಗಿದ್ದಾರಂತೆ. ಬೆಂಗಳೂರಿಂದ ಬರುವಾಗ ಬಸ್ಸಿನ ವ್ಯವಸ್ಥೆ ಬಹಳ ತುಂಬಾ ಚೆನ್ನಾಗಿತ್ತು ಆದರೆ ಹೋಗುವಂತ ಸಮಯದಲ್ಲಿ ಬಸ್ಸಿನ ಕೊರತೆ ಎದ್ದು ಕಾಣುತ್ತಿದೆ. ಶಾಸಕರು. ಡಿಪೋ ಮ್ಯಾನೇಜರ್ ಸಾರ್ವಜನಿಕರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಸರಾಗವಾಗಿ ಜನರಿಗೆ ಹೋಗಲು ವ್ಯವಸ್ಥೆ ಕಲ್ಪಿಸಬೇಕು ಎಂದು ಅಳಲು ತೋಡಿಕೊಂಡರು.

Author:

...
Editor

ManyaSoft Admin

share
No Reviews