ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ವಿರುದ್ಧ ತುಮಕೂರಿಗರ ಆಕ್ರೋಶ

ಬೆಂಗಳೂರು : ಬೆಂಗಳೂರು ಮತ್ತು ತುಮಕೂರಿನ ನಡುವಿನ ಮೆಟ್ರೋ ಸಂಪರ್ಕ ಯೋಜನೆ ಇದೀಗ ರಾಜಕೀಯ ವಾದ ವಿವಾದಗಳಿಗೆ ಕಾರಣವಾಗುತ್ತಿದೆ. ತುಮಕೂರಿಗೆ ಮೆಟ್ರೋ ಬರುತ್ತಿರುವ ವಿಷಯವಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತುಮಕೂರು ಈಗಾಗಲೇ ದೇಶದಲ್ಲೇ ಸ್ಮಾರ್ಟ್‌ ಸಿಟಿ ಎಂದು ಗುರುತಿಸಿಕೊಂಡಿದೆ. ಸಂಸದ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಈಗಾಗಲೇ ಕೋಟ್ಯಾಂತರ ರೂಪಾಯಿಯಲ್ಲಿ ರೈಲ್ವೆ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದೆಲ್ಲದರ ನಡುವೆ ತುಮಕೂರಿನಲ್ಲಿ ಒಂದು ಏರ್‌ಪೋರ್ಡ್‌ ಆಗಬೇಕು ಅನ್ನೋ ಬೇಡಿಕೆ ಕೂಡ ಇತ್ತು. ಇನ್ನು ಬೆಂಗಳೂರು ಮೆಟ್ರೋ ತುಮಕೂರಿಗೆ ಬರಲಿದೆ ಅನ್ನೋದು ಸತ್ಯ. ಈಗಾಗಲೇ ಬಿಎಂಆರ್‌ಸಿಎಲ್‌ ಸರಿಸುಮಾರು ನಾಗಮಂಗಲದವರೆಗೆ ತಲುಪಿದೆ. ಸದ್ಯ ತೇಜಸ್ವಿ ಸೂರ್ಯ ಮತ್ತು ಬಾಸ್ಕರ್‌ ರಾವ್‌ ನಾಲಿಗೆ ಹರಿಬಿಟ್ಟು ಯಡವಟ್ಟು ಮಾಡಿಕೊಂಡಿದ್ದಾರೆ.

ಬೆಂಗಳೂರು – ತುಮಕೂರು ನಡುವೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಖಾಸಗಿ ಕಂಪನಿಯಿಂದ ಪಡೆದುಕೊಂಡ ಬಿಎಂಟಿಸಿ ಅಧೀನದ ಬಿಎಂಆರ್‌ಸಿಎಲ್‌ ಇದೀಗ ಸರ್ಕಾರಕ್ಕೆ ಸಲ್ಲಿಸಿದ್ದಂತೆಯೇ, ಈ ಯೋಜನೆಗೆ ವಿರುದ್ಧ ಧ್ವನಿಗಳು ಕೇಳಿ ಬರುತ್ತಿದೆ. ಮಾಧ್ಯಮ ಎಕ್ಸ್​​ನಲ್ಲಿನಲ್ಲಿ ಸಂಸದ ತೇಜಸ್ವಿ ಸೂರ್ಯ  “ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಸರ್ಕಾರದ ನಿರ್ಧಾರ ಬುದ್ದಿಹೀನವಾಗಿದೆ. ಮೆಟ್ರೋ ಎಂಬುದು ನಗರ ಒಳಗಿನ ಸಾರಿಗೆ ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾದದ್ದು. ಇಂಥ ಯೋಜನೆಗೆ ಬದಲಾಗಿ ಸಬ್‌ ಅರ್ಬನ್ ರೈಲು ಅಥವಾ ಆರ್‌ ಆರ್‌ಟಿಎಸ್‌ ಮಾರ್ಗವು ಸೂಕ್ತ ಆಯ್ಕೆ” ಬೆಂಗಳೂರು ತುಮಕೂರು ಮೆಟ್ರೋ ಸಂಪರ್ಕ ಒಂದು ಸ್ಟುಪಿಡ್ ಐಡಿಯಾ ಎಂದು ಟೀಕಿಸಿದ್ದಾರೆ

ತುಮಕೂರಿಗೆ ಮೆಟ್ರೋ ವಿಸ್ತರಿಸುವ ಯೋಜನೆಗೆ ಮತ್ತೊಬ್ಬ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಭಾಸ್ಕರ ರಾವ್ ಅವರು, ‘“ಮೆಟ್ರೋ, ಸಬ್‌ ಅರ್ಬನ್, ಇಂಟರ್‌ಸಿಟಿ ಹಾಗೂ ದೀರ್ಘ ದೂರ ಸಂಚಾರ ರೈಲುಗಳ ವ್ಯತ್ಯಾಸವನ್ನೂ ಈ ಸರ್ಕಾರಕ್ಕೆ ಯಾರಾದರೂ ವಿವರಿಸಬೇಕು. ಈ ತರದ ಬೇಡಿಕೆಗಳು ಮುಂದಾಗಿ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದಾದ ಪರಿಸ್ಥಿತಿ ಬರುತ್ತದೆ” ಎಂದು ಉಲ್ಲೇಖಿಸಿದ್ದಾರೆ.

ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ‘ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆ ಎಂದಿದ್ದಾರೆ. ತುಮಕೂರಿಗೆ ಮೆಟ್ರೋ ಯೋಜನೆ ಕುರಿತು ಬಿಎಂಆರ್ಸಿಎಲ್ ಈಗಾಗಲೇ ವರದಿ ಸಲ್ಲಿಸಿದ್ದು, ನಮ್ಮ ಅವಧಿಯಲ್ಲೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದ್ದರು. ಇದೀಗ ತೇಜಸ್ವೀ ಸೂರ್ಯ ಮತ್ತು ಬಾಸ್ಕರ್‌ ರಾವ್‌ ಹೇಳಿಕೆಗಳು ತುಮಕೂರಿಗರನ್ನು ಮಾತ್ರವಲ್ಲ.ತುಮಕೂರಿನ ಹಿರಿಯ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಇಂತಹ ಹೇಳಿಕೆ ನೀಡಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

 

 

 

 

Author:

...
Keerthana J

Copy Editor

prajashakthi tv

share
No Reviews