ತುಮಕೂರು : ತುಮಕೂರಿನ ಅಂತರಸನಹಳ್ಳಿಯಲ್ಲಿ ಭಾರೀ ದುರಂತ ; ಆಯಿಲ್ ಟ್ಯಾಂಕ್ ಬ್ಲಾಸ್ಟ್, ಇಬ್ಬರು ಕಾರ್ಮಿಕರು ಸಾವು

ಪರಿಮಳ ಅಗ್ರೋ ಫುಡ್‌ ಇಂಡಸ್ಟ್ರಿ ಆಯಿಲ್‌ ಟ್ಯಾಂಕ್‌ ಬ್ಲಾಸ್ಟ್‌
ಪರಿಮಳ ಅಗ್ರೋ ಫುಡ್‌ ಇಂಡಸ್ಟ್ರಿ ಆಯಿಲ್‌ ಟ್ಯಾಂಕ್‌ ಬ್ಲಾಸ್ಟ್‌
ತುಮಕೂರು

ತುಮಕೂರು:

ಇಂದು ಸಂಜೆ ತುಮಕೂರಿನ ಅಂತರಸನಹಳ್ಳಿಯಲ್ಲಿ ಭಾರೀ ದುರಂತವೊಂದು ನಡೆದುಹೋಗಿದೆ. ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನು ಹಲವರಿಗೆ ಗಂಭೀರ ಗಾಯಗಳಾಗಿವೆ.

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪರಿಮಳ ಅಗ್ರೋ ಫುಡ್‌ ಇಂಡಸ್ಟ್ರಿಯ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. ಭತ್ತದ ಹೊತ್ತಿನಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿ ಇದಾಗಿದ್ದು, ಇಲ್ಲಿನ ಆಯಿಲ್‌ ಟ್ಯಾಂಕ್‌ ಬ್ಲಾಸ್ಟ್‌ ಆಗಿ ದುರಂತ ಸಂಭವಿಸಿದೆ. ಸುಮಾರು ೩೦ ಅಡಿ ಎತ್ತರದ ಆಯಿಲ್ ಟ್ಯಾಂಕ್ ಬಳಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಈ ಆಯಿಲ್‌ ಟ್ಯಾಂಕ್‌ ಬ್ಲಾಸ್ಟ್‌ ಆಗಿದೆ. ದುರಂತದಲ್ಲಿ ಬಿಹಾರ್‌ ಮೂಲದ ಕಾರ್ಮಿಕರಾದ ಸಂತೋಷ್‌ ಹಾಗೂ ಚಂದನ್‌ ಶರ್ಮಾ ಸಾವನ್ನಪ್ಪಿದ್ದಾರೆ. ಪ್ರೆಷರ್‌ ಹೆಚ್ಚಾದ ಕಾರಣ ಆಯಿಲ್‌ ಟ್ಯಾಂಕ್‌ ಬ್ಲಾಸ್ಟ್‌ ಆಗಿರುವ ಸಾಧ್ಯತೆಯಿದೆ.

ಇನ್ನು ಘಟನೆಯಲ್ಲಿ ಗಂಭೀರ ಗಾಯಗೊಂಡಿರುವವರನ್ನ ತುಮಕೂರಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತುಮಕೂರು ಎಸ್‌ಪಿ ಅಶೋಕ್‌ ವೆಂಕಟ್‌, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author:

share
No Reviews