ತುಮಕೂರು :
ತುಮಕೂರು ನಗರ ದಿನ ದಿನಕ್ಕೆ ಬೆಳೆಯುತ್ತಿದ್ದು, ಸ್ಮಾರ್ಟ್ ಸಿಟಿ ಅಂತ ಖ್ಯಾತಿ ಗಳಿಸಿದೆ. ಆದರೆ ಪಾಲಿಕೆಯ ಪ್ರತಿ ವಾರ್ಡ್ನಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ನಗರದ 16 ನೇ ವಾರ್ಡ್ ನ ಆರ್ ಟಿ ನಗರ ಮುಖ್ಯ ರಸ್ಥೆಯ ಚರಂಡಿ ಗಬ್ಬೆದ್ದು ನಾರುತ್ತಿದ್ದು, ಪ್ರತಿನಿತ್ಯ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ನಿಮ್ಮ ಪ್ರಜಾಶಕ್ತಿ ಜನಪರವಾಗಿ ಹಲವಾರು ಸಮಸ್ಯೆಗಳ ಬಗ್ಗೆ ಪ್ರತಿನಿತ್ಯ ಕೆಲಸ ಮಾಡ್ತಿದೆ. ಆದರೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ ಆರ್ ಟಿ ನಗರದ ಮುಖ್ಯರಸ್ಥೆಯ ಚರಂಡಿ ಗಬ್ಬೆದ್ದು ನಾರುತ್ತಿದೆ. ಆದರೆ ಸ್ವಚ್ಚತಾ ಸಿಬ್ಬಂದಿಗಳ ನಿರ್ಲಕ್ಷತನದಿಂದ ಆರ್ ಟಿ ನಗರದ ಜನರಿಗೆ ಸ್ವಚ್ಛತೆ ಭಾಗ್ಯ ಅನ್ನೋದು ಮರೀಚಿಕೆಯಾಗಿದೆ.
ಈ ಚರಂಡಿ ನಿರ್ಮಾಣಕ್ಕೆ ಟೆಂಡರ್ ತೆಗೆದುಕೊಂಡಿದ್ದ ಕಂಟ್ರಾಕ್ಟರ್ ಅರ್ಧಂಬರ್ಧ ಕೆಲಸ ಮಾಡಿ ಚರಂಡಿಯ ಮೇಲೆ ಸ್ಲಾಬ್ ಕೂಡ ಹಾಕದೆ ಇರುವುದರಿಂದ ಚರಂಡಿಯ ಒಳಗೆ ಗಿಡ ಗೆಂಟೆಗಳು ಬೆಳೆದುಕೊಂಡಿದ್ದು ಸಂಜೆಯಾದರೆ ಸಾಕು ಇಲ್ಲಿ ಹಾವುಗಳ ಕಾಟ ತುಂಬಾ ಜಾಸ್ತಿ ಅಗ್ತಿದೆ. ಇದರಿಂದ ನಾವುಗಳು ಓಡಾಡುವುದಕ್ಕೂ ಸಹ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇಂತಹ ಅದೆಷ್ಟೋ ಚರಂಡಿಗಳು ಇಂದಿಗೂ ಗಬ್ಬೆದ್ದು ನಾರುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇನ್ನಾದರೂ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಆರ್ ಟಿ ನಗರದ ಜನರಿಗೆ ಸ್ವಚ್ಚತೆಯ ಭಾಗ್ಯ ನೀಡುತ್ತಾರ ಇಲ್ವಾ ಅನ್ನೊದನ್ನು ಕಾದು ನೋಡಬೇಕಿದೆ.