ತುಮಕೂರು : ಫ್ರೆಂಡ್ಸ್ ಜೊತೆ ಮಾತನಾಡುತ್ತಿದ್ದ ವೇಳೆಯೇ ಹೃದಯಾಘಾತ ವಿದ್ಯಾರ್ಥಿ ಸಾವು...

ಮೃತ ವಿದ್ಯಾರ್ಥಿ ಶಮಂತ್
ಮೃತ ವಿದ್ಯಾರ್ಥಿ ಶಮಂತ್
ತುಮಕೂರು

ತುಮಕೂರು : ಇತ್ತೀಚಿಗೆ ಯುವ ಜನತೆಯಲ್ಲಿ ಹೃದಯಘಾತವಾಗೋ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ  ಆರೋಗ್ಯವಂತ ಯುವಕ, ಯುವತಿಯರೇ ಹಾರ್ಟ್ ಅಟ್ಯಾಕ್‌ನಿಂದ ಸಾಯುತ್ತಿದ್ದಾರೆ. ಇನ್ನು ಮತ್ತಷ್ಟು ಆಘಾತಕಾರಿ ವಿಚಾರ ಅಂದರೆ ಶಾಲೆಗೆ ಹೋಗುವ ಪುಟ್ಟ ಪುಟ್ಟ ಮಕ್ಕಳನ್ನೂ ಹೃದಯಾಘಾತವೆಂಬ ಮಾರಿ ಬಿಡದೇ ಕಾಡುತ್ತಿದೆ. ಓದಿ, ಒಳ್ಳೆ ಕೆಲಸ ತೆಗೆದುಕೊಂಡು, ಸಾಧನೆ ಮಾಡಬೇಕು ಎಂದೆಲ್ಲಾ ಕನಸು ಕಂಡವರು ಹೃದಯಾಘಾತ ಎಂಬ ಪಾಶಕ್ಕೆ ಬಲಿಯಾಗ್ತಿರೋದು ಮಾತ್ರ ಯುವಜನತೆಯಲ್ಲಿ ಭಯವನ್ನು ಉಂಟು ಮಾಡ್ತಿದೆ. ರಾಜ್ಯ, ದೇಶದಲ್ಲಂಥೂ ಇತ್ತೀಚೆಗೆ ಹಾರ್ಟ್‌ ಅಟ್ಯಾಕ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ, ಇದು ವೈದ್ಯ ಲೋಕಕ್ಕೆ ಒಂದು ದೊಡ್ಡ ಸವಾಲಾಗಿದೆ.

ಜನವರಿ 6 ರಂದು ಚಾಮರಾಜನಗರದಲ್ಲಿ 9 ವರ್ಷದ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದ ಅಸುನೀಗಿದ್ದ ಬೆನ್ನಲ್ಲೇ ಎರಡು, ಮೂರು ದಿನಗಳ ಹಿಂದಷ್ಟೇ 17 ವರ್ಷದ ಶಮಂತ್‌ ಹೃದಯಾಘಾತಕ್ಕೆ ಉಸಿರು ನಿಲ್ಲಿಸಿದ್ದಾನೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಿನಾಯಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶಮಂತ್‌ ಪ್ರಿಪರೇಟರಿ ಎಕ್ಸಾಂ ಮುಗಿಸಿದ ಬಳಿಕ ಕಾಲೇಜು ಆವರಣದಲ್ಲಿ ಸ್ನೇಹಿತರೊಟ್ಟಿಗೆ ಮಾತನಾಡುತ್ತಿದ್ದ ವೇಳೆಯೇ ಶಮಂತ್‌ಗೆ ಎದೆ ನೋವು ಕಾಣಿಸಿಕೊಂಡಿದ್ದು ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯ್ತು ಆದರೆ ಅಷ್ಟರಲ್ಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶಮಂತ್‌ ಅಕಾಲಿಕ ಸಾವಿಗೆ ಸ್ನೇಹಿತರು ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗ್ತಾ ಇದೆ. ಆರೋಗ್ಯವಾಗಿ ಇದ್ದವರೇ ಏಕಾಏಕಿ ಬಲಿಯಾಗ್ತಿರೋದು ಮಾತ್ರ ಸಮಾಜದಲ್ಲಿ ಒಂದು ಭೀತಿ ಹುಟ್ಟಿಸುತ್ತಿದೆ.

Author:

...
Editor

ManyaSoft Admin

Ads in Post
share
No Reviews