ತುಮಕೂರು : ರಾಜ್ಯಾದ್ಯಂತ ಇಂದು ನೀಟ್ ಎಕ್ಸಾಂ..!

ತುಮಕೂರು :

ದೇಶಾದ್ಯಂತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್‌ ಪರೀಕ್ಷೆ ನಡೆಯುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಾವು ಅತ್ಯುತ್ತಮ ಅಂಕ ಗಳಿಸಬೇಕೆಂದು ಪಣತೊಟ್ಟಿರುತ್ತಾರೆ. ಅದರಂತೆ ಇಂದು ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ಹಿಡಿದು ಪೋಷಕರ ಜೊತೆ ಎಕ್ಸಾಂ ಸೆಂಟರ್‌ಗಳ ಮುಂದೆ ಜಮಾಯಿಸಿದರು. ತುಮಕೂರಿನ ಜ್ಯೂನಿಯರ್‌ ಕಾಲೇಜಿನಲ್ಲಿ ಕೂಡ ಇಂದು ನೀಟ್‌ ಎಕ್ಸಾಂ ನಡೆಯುತ್ತಿದೆ. 

ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಬೆಳಗ್ಗೆ 10 ಗಂಟೆಯಿಂದಲೇ ಎಕ್ಸಾಮ್‌ ಸೆಂಟರ್‌ಗಳತ್ತ ಧಾವಿಸಿದರು. ಅಲ್ಲದೇ ಪರೀಕ್ಷಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಬಂದ ವಿದ್ಯಾರ್ಥಿಗಳನ್ನು ಪೊಲೀಸ್‌ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಸಂಬಾಳಿಸಿ ಎಕ್ಸಾಮ್‌ ಸೆಂಟರ್‌ ಒಳಗೆ ಕಳುಹಿಸಿಕೊಟ್ಟಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಕನಸು ಕಟ್ಟಿಕೊಂಡು ಹಗಲು ಇರುಳು ಎನ್ನದೆ ಓದುತ್ತಾ ಇದ್ದು, ಇಂದು ತಮ್ಮ ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದ್ದಾರೆ. 

Author:

...
Sushmitha N

Copy Editor

prajashakthi tv

share
No Reviews