ತುಮಕೂರು : ಗಬ್ಬು ನಾರುತ್ತಿದ್ದ ಸದಾಶಿವ ನಗರ ಈಗ ಫುಲ್ ಕ್ಲೀನ್.. ಕ್ಲೀನ್

ಸ್ವಚ್ಚತೆಯಾಗಿರುವ ಚರಂಡಿ
ಸ್ವಚ್ಚತೆಯಾಗಿರುವ ಚರಂಡಿ
ತುಮಕೂರು

ತುಮಕೂರು:

ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಸುಮ್ಮನಾಗಲ್ಲ ಅಂತಾ ಪದೇ ಪದೇ ಸಾಬೀತು ಪಡಿಸುತ್ತಲೇ ಇದೆ. ತುಮಕೂರಿನ ಮೂಲೆ ಮೂಲೆಯಲ್ಲೂ ಇರೋ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸಮಸ್ಯೆ ಪರಿಹಾರ ಆಗೋವರೆಗೂ ನಿರಂತರ ವರದಿ ಮಾಡುತ್ತಲೇ ಇತ್ತುವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಇದೀಗ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಿದೆ.

ಹೌದು ತುಮಕೂರಿನ  ಸದಾಶಿವ ನಗರ 4ನೇ ಮುಖ್ಯರಸ್ತೆ, 8ನೇ ಅಡ್ಡ ರಸ್ತೆಯಲ್ಲಿ ಯುಜಿಡಿ ನೀರು ಉಕ್ಕಿ ಹರಿಯುತ್ತಿದ್ದು, ಇಡೀ ಏರಿಯಾವೇ ಗಬ್ಬೇದು ನಾರುತ್ತಿತ್ತುಇದರಿಂದ ಜನರಲ್ಲಿ ಸಾಂಕ್ರಾಮಿಕ ಹರಡುವ ಭೀತಿ ಹೆಚ್ಚಾಗಿತ್ತು. ಅಲ್ಲದೇ ಯುಜಿಡಿ ನೀರು ರಸ್ತೆಯ ಮೇಲೆ ಹರಿಯುತ್ತಿರೋದ್ರಿಂದ ಜನಡು ಓಡಾಡಲು ಮುಜುಗರ ಪಡುವಂತಾಗಿತ್ತು ಬಗ್ಗೆ ಜನರು ಹಲವು ಬಾರಿ ಮನವಿ ಮಾಡಿಕೊಂಡಿದ್ದರು ಕೂಡ ಅಧಿಕಾರಿಗಳು ಮಾತ್ರ ಕ್ಲೀನ್ಮಾಡಿಸುವ ಕೆಲಸ ಮಾತ್ರ ಮಾಡಿರಲಿಲ್ಲ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿತ್ತುಸುದ್ದಿ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಕಟ್ಟಿಕೊಂಡಿದ್ದ ಯುಜಿಡಿ ಚೇಂಬರ್‌ ಹಾಗೂ ಚರಂಡಿಗಳನ್ನು ಕ್ಲೀನ್ಮಾಡಿಸುವಂತಹ ಕೆಲಸ ಮಾಡಿದೆ.

ಒಟ್ಟಿನಲ್ಲಿ ನಿಮ್ಮ ಪ್ರಜಾಶಕ್ತಿ ಟಿವಿಯು ಸುದ್ದಿಯ ನೈಜತೆಯನ್ನು ವರದಿ ಮೂಲಕ ಬಿತ್ತರಿಸಿದ್ದು, ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಯುಜಿಡಿ ನೀರಿನ ಸಮಸ್ಯೆಯಿಂದ ಜನರಿಗೆ ಮುಕ್ತಿ ಸಿಕ್ಕಂತಾಗಿದ್ದು ಪ್ರಜಾಶಕ್ತಿ ಟಿವಿಗೆ ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Author:

share
No Reviews