ತುಮಕೂರು :
ಪ್ರಜಾಶಕ್ತಿ ಟಿವಿ ವರದಿ ಮಾಡಿ ಸುಮ್ಮನೆ ಕೂರಲ್ಲ ಅನ್ನೋದನ್ನು ಮತ್ತೆ ಮತ್ತೆ ಸಾಬೀತು ಮಾಡ್ತಾನೆ ಇದೆ. ಸಾಲು ಸಾಲು ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಮೂಲಕ ಜನಸಾಮಾನ್ಯರ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡ್ತಿದೆ. ಅದರಂತೆ ನಗರದ ಶೆಟ್ಟಿಹಳ್ಳಿ ಫುಟ್‌ಪಾತ್‌ನಲ್ಲಿ ತಲೆ ದೋರಿದ್ದ ಕಸದ ಸಮಸ್ಯೆ ಬಗ್ಗೆ ವರದಿ ಮಾಡಿ ಎರಡೇ ದಿನಕ್ಕೆ ಫುಟ್‌ಪಾತ್‌ನನ್ನು ಪಾಲಿಕೆ ಸಿಬ್ಬಂದಿ ಫುಲ್ ಕ್ಲೀನ್ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಫುಟ್ ಪಾತ್ ಏನೋ ತೆರವಾಯ್ತು, ತಿಪ್ಪೆ ರಾಶಿಗೆ ಯಾವಾಗ್ರೀ ಮುಕ್ತಿ? ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿ ಬಿತ್ತರ ಮಾಡಲಾಗಿತ್ತು. ವರದಿ ಮಾಡಿ ಎರಡೇ ದಿನಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದು ಕಸವನ್ನು ತೆರವು ಮಾಡಿ ಜನರ ಓಡಾಟಕ್ಕೆ ಅನುಕೂಲ ಮಾಡಿ ಕೊಡಲಾಗಿದೆ.
ಇನ್ನು ಕಸದ ಸಮಸ್ಯೆಯಿಂದ ಮುಕ್ತಿಯಾಗಿದ್ದಕ್ಕೆ ಸ್ಥಳೀಯರು ಪ್ರಜಾಶಕ್ತಿ ಟಿವಿಗೆ ಅಭಿನಂದನೆ ಸಲ್ಲಿಸಿದರು. ಕಳೆದ 15 ದಿನಗಳಿಂದ ಇಲ್ಲಿ ರಾಶಿ ರಾಶಿ ಕಸ ಬಿದಿದ್ದರೂ ಕೂಡ ಪಾಲಿಕೆ ಕ್ಲೀನ್ ಮಾಡುವ ಕೆಲಸ ಮಾತ್ರ ಮಾಡ್ತಾ ಇರಲಿಲ್ಲ. ಆದ್ರೆ ಪ್ರಜಾಶಕ್ತಿ ಟಿವಿಯಲ್ಲಿ ವರದಿ ಪ್ರಸಾರದ ಬಳಿಕ ಪಾಲಿಕೆ ಕ್ಲೀನ್ ಮಾಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಏನೇ ಆಗಲಿ ಸುದ್ದಿ ಮಾಡಿದ ನಂತರ ಎಚ್ಚೆತ್ತುಕೊಳ್ಳುವ ಅಧಿಕಾರಗಳು ಇನ್ನು ಮುಂದಾದರೂ ಈ ರೀತಿ ವ್ಯವಸ್ಥೆ ಆಗದಂತೆ ನೋಡಿಕೊಳ್ಳಲಿ ಎಂಬುದು ನಿಮ್ಮ ಪ್ರಜಾಶಕ್ತಿ ಟಿವಿಯ ಕಳಕಳಿ.