ತುಮಕೂರು:
ನಮ್ಮ ನಡಿಗೆ ನಶೆ ಮುಕ್ತ ತುಮಕೂರು ಕಡೆಗೆ ಎಂಬ ಪ್ರತಿಜ್ಞಾ ಪೂರ್ವಕ ಘೋಷಣೆಯೊಂದಿಗೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. 5K ಮತ್ತು 10K ಮ್ಯಾರಥಾನ್‌ಗೆ ತುಮಕೂರು ಎಸ್‌ಪಿ ಕೆ.ವಿ ಅಶೋಕ್, ಡಿಸಿ ಶುಭಕಲ್ಯಾಣ್ ಹಸಿರು ನಿಶಾನೆ ತೋರಿಸಿದರು. ನಗರದ ಎಸ್‌ಪಿ ಕಚೇರಿಯಿಂದ ಆರಂಭವಾದ ಮ್ಯಾರಥಾನ್ ಓಟ ಶಿವಕುಮಾರ ಸ್ವಾಮೀಜಿ ಸರ್ಕಲ್, BGS ಸರ್ಕಲ್, ಕಾಲ್‌ಟೆಕ್ಸ್ ಸರ್ಕಲ್ ಮಾರ್ಗವಾಗಿ ಅಮಾನಿಕೆರೆ ಗಾಜಿನಮನೆ ಬಳಿ ಮುಕ್ತಾಯವಾಯಿತು. ಸುಮಾರು 5 ಕಿಲೋ ಮೀಟರ್ ಸಾಗಿದ ಓಟದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅಥ್ಲೀಟ್‌ಗಳು, ಕಾಲೇಜು-ಶಾಲಾ ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು.
ಮ್ಯಾರಥಾನ್ ಓಟದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಎಸ್.ಪಿ ಅಶೋಕ್ ನಡೆಯುತ್ತಾ ಜನರೊಂದಿಗೆ ಸಂವಹನ ನಡೆಸಿದರು. ಜಿಲ್ಲಾ ಮಟ್ಟದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿಯನ್ನು ಮೂಡಿಸಲು, ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡಲು ಈ ಮ್ಯಾರಥಾನ್ ಮಹತ್ವದ್ದಾಗಿದೆ ಎಂದು ಡಿಸಿ ಶುಭಕಲ್ಯಾಣ್ ಅಭಿಪ್ರಾಯಪಟ್ಟರು.
ತುಮಕೂರು ಎಸ್‌ಪಿ ಕೆ.ವಿ ಅಶೋಕ್ ಮಾತನಾಡಿ ಜನರಲ್ಲಿ ಡ್ರಗ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಮ್ಯಾರಥಾನ್‌ನನ್ನು ಆಯೋಜನೆ ಮಾಡಲಾಗಿದೆ. ಆಂಟಿ ಡ್ರಗ್ ಅವೆರ್‌ನೆಸ್ ಹಾಗೂ ಆಂಟಿ ಸೈಬರ್ ಫ್ರಾಡ್ ಬಗ್ಗೆ ಅವೆರ್‌ನೆಸ್ ಬಗ್ಗೆ ಮ್ಯಾರಥಾನ್‌ನಲ್ಲಿ ಜನರು ಉತ್ಸುಕರಾಗಿ ಭಾಗಿಯಾಗಿದ್ದಾರೆ ಎಂದರು.
ಅಂತಿಮವಾಗಿ ಮ್ಯಾರಥಾನ್ ಓಟ ಮುಗಿದ ನಂತರ ಜಿಲ್ಲಾಧಿಕಾರಿಗಳು ಓಟಗಾರರನ್ನು ಅಭಿನಂದಿಸಿದರು. ಅಲ್ಲದೇ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಟ್ನಲ್ಲಿ ಪೊಲೀಸರ ಮ್ಯಾರಥಾನ್ ತುಮಕೂರು ಜನತೆಗೆ ಹೊಸ ಉತ್ಸಾಹ, ಜಾಗೃತಿ ಮತ್ತು ಆರೋಗ್ಯಕರ ಬದುಕಿನತ್ತ ಒಲವು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿತು.