ತುಮಕೂರು :
ಪ್ರಜಾಶಕ್ತಿ ಮಾಧ್ಯಮ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದೆ ಅಂದರೆ ತಪ್ಪಾಗಲಾರದು. ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ನಗರದ ಹಲವೆಡೆ ಸಮಸ್ಯೆಗಳು ಸೃಷ್ಟಿಯಾಗಿದ್ವು. ಈ ಬಗ್ಗೆ ಸಾರ್ವಜನಿಕರು ಮನವಿ ಮಾಡಿ ಪತ್ರ ಬರೆದಿದ್ರು ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿರಲಿಲ್ಲ, ಹೌದು ನಗರದ ಬಿ.ಎಚ್ ರಸ್ತೆಗೆ ಹೊಂದಿಕೊಂಡತೆ ಭದ್ರಮ್ಮ ಚೌಟ್ರಿ ಬಳಿ ಇರೋ ಚರಂಡಿ ಸುಮಾರು ವರ್ಷಗಳಿಂದ ಕಟ್ಟಿಕೊಂಡಿದ್ದು ನಿತ್ಯ ಸವಾರರಿಗೆ, ಅಕ್ಕ ಪಕ್ಕದ ನಿವಾಸಿಗಳಿಗೆ ಸಂಕಷ್ಟ ಎದುರಾಗಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದ ಮಾಡಿ ಒಂದೇ ದಿನಕ್ಕೆ ಪಾಲಿಕೆ ಸಿಬ್ಬಂದಿ ಧಾವಿಸಿ ಚರಂಡಿಗಳನ್ನು ಕ್ಲೀನ್ ಮಾಡಿಸುವ ಕೆಲಸ ಮಾಡಿದ್ದಾರೆ.
ನಗರದ ಪ್ರಮುಖ ಕೇಂದ್ರವಾದ ಭದ್ರಮ್ಮ ಚೌಟ್ರಿ ಬಳಿ ಇರೋ ದೊಡ್ಡ ಚರಂಡಿ ಸುಮಾರು ವರ್ಷಗಳಿಂದ ಕಟ್ಟಿಕೊಂಡಿದ್ದು, ಪಾಲಿಕೆ ಅಧಿಕಾರಿಗಳು ಮಾತ್ರ ಕೈಕಟ್ಟಿ ಕೂತಿದ್ದರು. ಚರಂಡಿಯಲ್ಲಿದ್ದ ಕಸವನ್ನು ಎತ್ತದಿರೋದರಿಂದ ಗಬ್ಬೇದ್ದು ನಾರುತ್ತಿತ್ತು. ಚರಂಡಿ ಸುತ್ತಮುತ್ತಾ ಹಾಸ್ಟೆಲ್, ಆಸ್ಪತ್ರೆ, ಮನೆಗಳು ಇದ್ದು, ಚರಂಡಿ ಕಟ್ಟಿಕೊಂಡ ಪರಿಣಾಮ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇತ್ತು. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗ್ತಾ ಇರಲಿಲ್ಲ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿಯಲ್ಲಿ ಕಳೆದ ವಾರ ಪಾಲಿಕೆ ನಿರ್ಲಕ್ಷ್ಯಕ್ಕೆ ಗಬ್ಬೇದ್ದು ನಾರುತ್ತಿದೆ ಚರಂಡಿ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಮಾಡಲಾಗಿತ್ತು. ವರದಿ ಮಾಡಿ ಒಂದೇ ದಿನಕ್ಕೆ ಓಡೋಡಿ ಬಂದ ಪಾಲಿಕೆ ಸಿಬ್ಬಂದಿ ಚರಂಡಿಯಲ್ಲಿ ಇದ್ದ ಕಸವನ್ನು ಹೊರ ತೆಗೆದು. ಕಸವನ್ನು ಜೆಸಿಬಿ ಮೂಲಕ ಎತ್ತಿಸಿ ಕಸವನ್ನು ವಿಲೇವಾರಿ ಮಾಡುವ ಕೆಲಸವನ್ನು ಮಾಡ್ತಿದೆ.
ಇನ್ನು ವರ್ಷಗಳಿಂದ ಕ್ಲೀನ್ ಆಗದ ಚರಂಡಿಗಳ ಬಗ್ಗೆ ಪ್ರಜಾಶಕ್ತಿ ವರದಿ ಮಾಡ್ತಿತ್ತಂತೆ ಎಚ್ಚೆತ್ತು, ಚರಂಡಿಯಲ್ಲಿದ್ದ ಕಸವನ್ನು ವಿಲೇವಾರಿ ಮಾಡ್ತಾ ಇರೋದಕ್ಕೆ ನಿವಾಸಿಗಳು ಪ್ರಜಾಶಕ್ತಿಗೆ ಅಭಿನಂದನೆ ಸಲ್ಲಿಸ್ತಾ ಇದ್ದಾರೆ. ಅದೇನೆ ಆಗಲಿ, ನಗರದ ಸ್ವಚ್ಛತೆಗೆಂದು ಸರ್ಕಾರದಿಂದ ಪಾಲಿಕೆಗೆ ಸಾಕಷ್ಟು ಅನುದಾನ ಬಂದರೂ ಕೂಡ ಪಾಲಿಕೆ ಅಧಿಕಾರಿಗಳು ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿರೋದು ದುರಾದೃಷ್ಟವೇ ಸರಿ. ಇನ್ನಾದರೂ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ವರದಿ ಮಾಡುವ ಮುನ್ನವೇ ಸಮಸ್ಯೆಗಳನ್ನು ಬಗೆಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ್ತಾರಾ ಎಂದು ಕಾದು ನೋಡಬೇಕಿದೆ.