ತುಮಕೂರು :
ತುಮಕೂರು ನಗರದ ಜಯಪುರದ ಮೈದಾನದಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನತ್ತಿದ ತುಮಕೂರು ಪೊಲೀಸರು ನಿನ್ನೆ ಮಧ್ಯಾಹ್ನದ ಸುಮಾರಿಗೆ ಬಹುತೇಕ ಪ್ರಕರಣವನ್ನು ಬೇಧಿಸಿ, ಘಟನೆ ನಡೆದ 18 ಗಂಟೆಯೊಳಗೆ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೆಲಮಂಗಲ ಬಳಿಯ ಕುಡ್ಲೂರು ಗ್ರಾಮದ ನಿವಾಸಿ ದಿಲೀಪ್ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತ ತನ್ನ ಮೊದಲ ಹೆಂಡತಿಯನ್ನು ಬಿಟ್ಟು ಜಯಪುರ ಮೂಲದ ಅಮೃತಾ ಎಂಬಾಕೆ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ, ಜೊತೆಗೆ ಅಮೃತಾಗೆ ಮೊದಲೇ ಒಂದು ಮದುವೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳು ಕೂಡ ಇದ್ದರು ಎನ್ನಲಾಗಿದೆ. ಇನ್ನು ಕೊಲೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅಮೃತಾ, ನೆಲಮಂಗಲಕ್ಕ ಊಟಕ್ಕೆ ಹೋಗಿದ್ದಾಗ ಯಾರೋ ನಾಲ್ಕೈದು ಜನರು ಬಂದು ದಿಲೀಪ್ ಮೇಲೆ ಹಲ್ಲೆ ಮಾಡಿ, ಆತನನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದರು ಅಂತಾ ಹೇಳಿದ್ದರು, ಇದೀಗ ಅಮೃತಾ ಸಂಬಂಧಿಯಿಂದಲೇ ದಿಲೀಪನ ಕೊಲೆ ನಡೆದಿದೆ ಅನ್ನೋ ವಿಚಾರ ಬಯಲಾಗಿದೆ. ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಅಮೃತಾ ಸಂಬಂಧಿ ವರುಣ್ ಮತ್ತು ಆತನ ಇಬ್ಬರು ಸ್ನೇಹಿತರಿಂದಲೇ ದಿಲೀಪ್‌ನ ಕೊಲೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ಬೆಳಕಿಗೆ ಬಂದ 18 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ತುಮಕೂರು ಪೋಲಿಸರು ಯಶಸ್ವಿಯಾಗಿದ್ದಾರೆ. ಕೊಲೆ ಮಾಡಿ ಚಿಕ್ಕಮಗಳೂರು ಬಳಿ ತಲೆಮರೆಸಿಕೊಂಡಿದ್ದ ಹಂತಕರನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಲೆಗೆ ಪ್ರಮುಖ ಕಾರಣ :
ಸದ್ಯ ಕೊಲೆಯಾಗಿರುವ ವ್ಯಕ್ತಿ ಅಮೃತಾಳ ಜೊತೆ ಇದ್ದಿದ್ದು, ಆಕೆಯ ಕಸಿನ್ ಬ್ರದರ್ ವರುಣ್‌ಗೆ ಸಿಟ್ಟು ತರಿಸಿತ್ತು. ಇನ್ನು ಇತ್ತೀಚೆಗೆ ಈ ದಿಲೀಪ ಅಮೃತಾಳಿಗೆ ಚಿತ್ರಹಿಂಸೆ ಕೊಡುತ್ತಿದ್ದನಂತೆ. ಅಲ್ದೇ ಯುಗಾದಿ ಹಬ್ಬಕ್ಕೆ ಜಯಪುರದ ಮನೆಗೆ ಬಂದಿದ್ದ ಅಮೃತಾಳನ್ನು ದಿಲೀಪ ಕೆಟ್ಟದಾಗಿ ಬೈದು ಹಲ್ಲೆ ಮಾಡಿ ಬಲವಂತವಾಗಿ ಕರೆದೊಕೊಂಡು ಹೋಗಿದ್ದನಂತೆ. ಇದರಿಂದ ವರುಣ್ ಮತ್ತಷ್ಟು ಕೋಪಗೊಂಡಿದ್ದ. ಇನ್ನು ಅಮೃತಾ ವಿಚಾರವಾಗಿ ವರುಣ್‌ಗೆ ತನ್ನ ಗ್ಯಾಂಗ್ ನಲ್ಲಿ ಮರ್ಯಾದೆ ಕಡಿಮೆ ಆಗಿತ್ತಂತೆ. ಆಗಾಗ ವರುಣ್ ಸ್ನೇಹಿತರು ಅಮೃತಾಳ ಬಗ್ಗೆ ಹೇಳಿ ಕಾಲೆಳೆಯುತ್ತಿದ್ದರಂತೆ. ಹೀಗಾಗಿ ದಿಲೀಪ್‌ನನ್ನ ಮುಗಿಸಲೇಬೇಕು ಅಂತಾ ವರುಣ್ ಪ್ಲಾನ್ ಮಾಡಿದ್ದು. ತನ್ನ ಸಹಚರರಾದ ದಿಬ್ಬೂರು ಮೂಲದ ಅರುಣ್ ಮತ್ತು ಶ್ರೀನಿವಾಸ್ ಜೊತೆ ಸೇರಿ ದಿಲೀಪ್ ಕೊಲೆಗೆ ಸ್ಕೆಚ್ ಹಾಕಿದ್ದ. ಒಂದು ವಾರದಿಂದ ದಿಲೀಪ್ ಚಲನವಲನದ ಮೇಲೆ ಸೋಲೂರು, ನೆಲಮಂಗಲ ಸೇರಿದಂತೆ ಹಲವು ಕಡೆಗಳಲ್ಲಿ ಕಾಯುತ್ತಿದ್ದು. ನೆಲಮಂಗಲದಲ್ಲಿ ಸಿಕ್ಕಿದ ದಿಲೀಪನ ಮೇಲೆ ಹಲ್ಲೆ ಮಾಡಿ ಅಪರಹರಿಸಿದ್ದರು. ಮೊನ್ನೆ ಮಧ್ಯ ರಾತ್ರಿಯವರೆಗೂ ಹಲ್ಲೆ ಮಾಡಿ, ಇಡೀ ರಾತ್ರಿ ಚಿತ್ರಹಿಂಸೆ ನೀಡಿ ದಿಲೀಪನನ್ನ ಕೊಲೆ ಮಾಡಿದ್ದರಂತೆ.
ಹೆಣವನ್ನು ಜಯಪುರದಲ್ಲಿ ಎಸೆದಿದ್ದು ಯಾಕೆ..?
ಇನ್ನು ಮೃತದೇಹವನ್ನ ಜಯಪುರದಲ್ಲೇ ತಂದು ಎಸೆಯಲು ಕಾರಣ ಹವಾ ಮಾಡುವ ಕಾರಣದಿಂದ ವರುಣ್ ಮತ್ತು ಆತನ ಸಹಚರರು ಈ ಕೃತ್ಯ ಎಸಗಿದ್ದಾರಂತೆ. ಜಯಪುರದಲ್ಲಿ ತಂದು ಮೃತದೇಹವನ್ನ ಎಸೆದರೆ ನನ್ನ ತಾಕತ್ ಏನೂ ಅಂತ ಗೊತ್ತಾಗುತ್ತೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಕೇಸ್ ದಾಖಲಾದರೆ ಒಳ್ಳೆ ಹವಾ ಇರುತ್ತೆ ಎಂಬ ಉದ್ದೇಶದಿಂದ ಈ ಕೃತ್ಯ ಎಸೆಗಿದ್ದಾರೆ. ಈ ಪ್ರಕರಣದ ಬೆನ್ನತ್ತಿದ್ದ ತುಮಕೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂರೂ ಜನ ಆರೋಪಿಗಳನ್ನ ಬಂಧಿಸಿ ನೆಲಮಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.