ತುಮಕೂರು :
ತುಮಕೂರಿಗರಿಗೆ ಬೆಸ್ಕಾಂ ಇಲಾಖೆ ಶಾಕ್ ಕೊಟ್ಟಿದ್ದು ಮೇ 4 ರಿಂದ 31 ರವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಗರದಲ್ಲಿ ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ತುಮಕೂರಿನ ಹಲವೆಡೆ ಮೇ 4 ರಿಂದ 31 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಇಲಾಖೆ ತಿಳಿಸಿದೆ.
ನಗರದ ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಅಣ್ಣೇತೋಟ, ಜಗನ್ನಾಥಪುರ, ಶಾರದ ದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ ಸೇರಿದಂತೆ ಅಗ್ನಿಬನ್ನಿರಾಯ ನಗರ ಹಾಗೂ ಭಾಗ್ಯ ನಗರದಲ್ಲಿ ಮೇ 4, 6, 8, 10, 12, 14, 16, 18, 20, 22, 24, 26, 29, 31 ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಾಗೂ ಗೋವಿಂದನಗರ, ಹೌಸಿಂಗ್ ಬೋಡ್, ಗುಬ್ಬಿಗೇಟ್, ಕುಂಟಮ್ಮನತೋಟ, ದಿಬ್ಬೂರು, ಬಿ.ಹೆಚ್.ಪಾಳ್ಯ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ, ಪಿ.ಎನ್.ಆರ್. ಪಾಳ್ಯ, ಕುಪ್ಪೂರು, ಹೊಸಹಳ್ಳಿಯಲ್ಲಿ ಮೇ 5, 7, 9, 11, 13, 15, 17, 19, 21, 23, 25, 28, 30 ರವೆರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಇಲಾಖೆ ತಿಳಿಸಿದೆ.