BUEATY TIPS: ನಿಮ್ಮ ಕೂದಲು ದಟ್ಟವಾಗಿ, ಕಪ್ಪಾಗಿ ಬೆಳೆಯಬೇಕಾ..? ಹಾಗಾದ್ರೆ ಈ ಹೋಮ್ ಮೇಡ್ ಸೀರಮ್ ಬಳಸಿ

BUEATY TIPS: 

ಪುರುಷರು ಅಥವಾ ಮಹಿಳೆಯರು ಯಾರೇ ಇರಲಿ, ಎಲ್ಲರೂ ತಮ್ಮ ಕೂದಲು ಯಾವಾಗಲೂ ದಟ್ಟವಾಗಿರಬೇಕು  ಎಂದು ಬಯಸುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಬದಲಾಗಿದೆ, ಮಾಲಿನ್ಯ ಹೆಚ್ಚಾಗಿದೆ ಮತ್ತು ಆಹಾರ ಪದ್ಧತಿ ಬದಲಾಗಿದೆ. ಇವೆಲ್ಲವೂ ನಮ್ಮ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.

ಹೇರ್ ಸೀರಮ್ ಅನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚಬಹುದು. ನಿಮ್ಮ ಕೂದಲಿನ ಬೇರುಗಳಿಗೆ ಸರಿಯಾಗಿ ಹಚ್ಚಿ. ಈ ಕೂದಲಿನ ಸೀರಮ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು, ಅವುಗಳ ವಿನ್ಯಾಸವನ್ನು ಸುಧಾರಿಸಲು ಮತ್ತು ಅವುಗಳ ಹೊಳಪನ್ನು ಸುಧಾರಿಸಲು ಸಹಾಯ ಮಾಡುತ್ತೆ. ಈ ಹೇರ್ ಸೀರಮ್ ಬಳಕೆ ಮಾಡೋದ್ರಿಂದ ಮತ್ತೊಂದು ಮುಖ್ಯವಾದ ಬದಲಾವಣೆ ಏನಾಗುತ್ತೆ ಅಂದ್ರೆ, ಒಂದೇ ವಾರದೊಳಗೆ ಈ ಸೀರಮ್ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ.

ಹೇರ್ ಸೀರಮ್ ಮಾಡಲು ಬೇಕಾಗುವ ಸಾಮಗ್ರಿಗಳು:
ಅಕ್ಕಿ - 2 ಚಮಚಗಳು
ಮೆಂತ್ಯ ಬೀಜಗಳು - 2 ಚಮಚಗಳು
ಕಲೌಂಜಿ ಬೀಜಗಳು - 1 ಚಮಚ
ನೀರು - 1 ದೊಡ್ಡ ಲೋಟ
ಒಣಗಿದ ದಾಸವಾಳ ಹೂವುಗಳು - 2 ಚಮಚ
ರೋಸ್ಮರಿ ಎಲೆಗಳು - 1 ಚಮಚ
ವಿಟಾಮಿನ್ ಇ ಕ್ಯಾಪ್ಸುಲ್

ಹೇರ್ ಸೀರಮ್ ತಯಾರಿಸುವ ವಿಧಾನ  :
-ರಾತ್ರಿ ಮಲಗುವ ಮುನ್ನ, ಒಂದು ದೊಡ್ಡ ಲೋಟ ನೀರಿನಲ್ಲಿ 2 ಚಮಚ ಅಕ್ಕಿ, 2 ಚಮಚ ಮೆಂತ್ಯ ಮತ್ತು 2 ಚಮಚ ಕಲೌಂಜಿ ಬೀಜಗಳನ್ನು ಬೆರೆಸಿ ರಾತ್ರಿಯಿಡೀ ನೆನೆಯಲು ಬಿಡಿ.ಮರುದಿನ, ಈ ಮೂರು ಬೀಜಗಳನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ ನಂತರ ಉಳಿದ ಪದಾರ್ಥಗಳು ಅಂದರೆ  ಡ್ರೈಆಗಿರುವ ದಾಸವಾಳದ ಹೂವುಗಳು ಮತ್ತು ರೋಸ್ಮರಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಪ್ಯಾನ್‌ನಲ್ಲಿರುವ ನೀರು ಅರ್ಧದಷ್ಟು ಆಗುವವರೆಗೆ ಎಲ್ಲವನ್ನೂ ಕುದಿಸಿ.ನಂತರ ಅದನ್ನು ಸೋಸಿ ಒಂದು ಬಟ್ಟಲು ಅಥವಾ ಗಾಜಿನಲ್ಲಿ ತೆಗೆದುಕೊಂಡು, ನಂತರ ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಅದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ.ಈ ಹೇರ್ ಸೀರಮ್ ಅನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಕೂದಲಿನ ಬೇರುಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಇದನ್ನು ಮಾಡೋದ್ರಿಂದ ಒಂದು ವಾರದಲ್ಲಿ ಪರಿಣಾಮಕಾರಿ ರಿಸಲ್ಟ್ ಪಡೆಯಬಹುದು. 

Author:

...
Keerthana J

Copy Editor

prajashakthi tv

share
No Reviews