ತುಮಕೂರು : ಮಂಡಿಪೇಟೆಯಲ್ಲಿ ಸರಣಿ ಕಳ್ಳತನ | ಬೆಚ್ಚಿಬಿದ್ದ ತುಮಕೂರಿಗರು

ಅಂಗಡಿ ಬಾಗಿಲು ಹೊಡೆದಿರುವುದು.
ಅಂಗಡಿ ಬಾಗಿಲು ಹೊಡೆದಿರುವುದು.
ತುಮಕೂರು

ತುಮಕೂರು :

ಐನಾತಿ ಖದೀಮರು ಅಂಗಡಿಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿದ್ದು ಸಿಕ್ಕ ಸಿಕ್ಕದನ್ನ ಎಗರಿಸಿಕೊಂಡು ಎಸ್ಕೇಪ್ಆಗಿದ್ದಾರೆ. ಎಂದಿನಂತೆ ಅಂಗಡಿ ಓಪನ್ಮಾಡಲು ಬಂದ ಅಂಗಡಿ ಮಾಲೀಕರು ಅಂಗಡಿಗಳ ಬೀಗ ಮುರಿದಿದ್ದನ್ನ ಕಂಡು ಶಾಕ್ಆಗಿದ್ದಾರೆತುಮಕೂರಿನ ವ್ಯಾಪಾರಿ ಕೇಂದ್ರ ಅಂತಾನೇ ಫೇಮಸ್ಆಗಿರೋ ಮಂಡಿಪೇಟೆಯ ಅಂಗಡಿಗಳಲ್ಲಿ ಸರಣಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗ್ಗೆ ಆದರೆ ಸಾಕು ತುಮಕೂರು ನಗರದ ಮಂಡಿಪೇಟೆಯಲ್ಲಿ ಕಾಲಿಡದಷ್ಟು ಜನವೋ ಜನ, ಆದರೆ ರಾತ್ರಿ ಆದರೆ ಜನರ ಓಡಾಟ ಕಡಿಮೆ ಇರುತ್ತೆ. ರಾತ್ರಿ ವೇಳೆ ಪೊಲೀಸರು ಬೀಟ್ಬರೋದು ಬಿಟ್ಟರೆ ಜನರ ಓಡಾಟ ಅಷ್ಟಾಗಿ ಇರೋದಿಲ್ಲ. ಮಂಡಿಪೇಟೆಯ ಅಂಗಡಿಗಳಲ್ಲಿ ಕಳ್ಳತನ ಮಾಡಬೇಕು ಅಂತಾ ತುಂಬಾ ದಿನದಿಂದ ಸ್ಕೆಚ್ಹಾಕಿದ್ದ ಖದೀಮರು ನಿನ್ನೆ ಪ್ಲಾನ್ನನ್ನು ಎಸ್ಟಾಬ್ಲೀಷ್ಮಾಡಿದ್ದಾರೆ. ನಿನ್ನೆ ರಾತ್ರಿ ಸುಮಾರು ಎರಡೂವರೆ ಗಂಟೆ ಸುಮಾರಿಗೆ ಅಂಗಡಿ ಸುತ್ತ ಖದೀಮನೊಬ್ಬ ಅಂಗಡಿಗಳ ಬಾಗಿಲು ಮುರಿದು ಸಿಕ್ಕಷ್ಟು ಹಣವಷ್ಟೇ ಅಲ್ಲದೇ ಡ್ರೈಫ್ರೂಟ್ನನ್ನು ಬಿಡದೇ ಚೀಲದಲ್ಲಿ ತುಂಬಿಕೊಂಡು ಎಸ್ಕೇಪ್ಆಗಿದ್ದಾರೆ.

ಮಂಡಿಪೇಟೆಯ ಮೊದಲ ಕ್ರಾಸ್ನಲ್ಲಿದ್ದ ಕೀರ್ತಿ ನಟ್ಸ್ ಅಂಡ್ ಸ್ಪೈಸಸ್ , ಜಯರತ್ನ ಟ್ರೇಡರ್ಸ್ ,Hcm ಈರುಳ್ಳಿ ಟ್ರೇಡರ್, ವೀರಭದ್ರೇಶ್ವರ ಟ್ರೇಡರ್ ಅಂಗಡಿಗಳ ಬೀಗ ಮುರಿದು ಕಳ್ಳರು ಕೈಚಳಕ ತೋರಿಸಿದ್ದು, ಅಂಗಡಿಯಲ್ಲಿ ಸಿಕ್ಕ ಸಿಕ್ಕಷ್ಟು ಹಣ ದೋಚಿದ್ದಾರೆ. ಇದಿಷ್ಟಲ್ಲದೇ ಡ್ರೈಫ್ರೂಟ್ಅಂಗಡಿಯಲ್ಲಿದ್ದ ಡ್ರೈಫ್ರೂಟ್ಗಳನ್ನು ಹಾಗೂ ಸುಮಾರು 15 ಕೆಜಿಯಷ್ಟು ಏಲಕ್ಕಿಯನ್ನು ಚೀಲದಲ್ಲಿ ತುಂಬಿಕೊಂಡ ಕಳ್ಳ ಎಸ್ಕೇಪ್ಆಗಿದ್ದಾನೆ. ಮಾಸ್ಕ್ಹಾಕಿಕೊಂಡು ಬಂದ ಐನಾತಿ ಕಳ್ಳ ಚೀಲದಲ್ಲಿ ಡ್ರೈಫ್ರೂಟ್ತುಂಬಿಕೊಳ್ಳುತ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳನ ಕೈಚಳಕ ಕಂಡು ಅಂಗಡಿ ಮಾಲೀಕ ಫುಲ್ಶಾಕ್ಗೆ ಒಳಗಾಗಿದ್ದಾನೆ.

ಖತರ್ನಾಕ್ಕಳ್ಳರು HCM ಟ್ರೇಡರ್ಸ್ನಲ್ಲಿ ಒಂದು ಸಾವಿರ ಹಣ ದೋಚಿದ್ದು, ಕೀರ್ತಿ ನಟ್ಸ್ ಅಂಡ್ ಸ್ಪೈಸಸ್ ಅಂಗಡಿಯ ಹಿಂದಿನ ಬಾಗಿಲು ಹೊಡೆದು ಅಂಗಡಿಯಲ್ಲಿದ್ದ  ಸುಮಾರು ಒಂದು ಲಕ್ಷದ 20 ಸಾವಿರ ಹಣದ ಜೊತೆ ಕೆಜಿ ಗಟ್ಟಲೆ ಡ್ರೈಫ್ರೂಟ್ನನ್ನು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾನೆ. ಇತ್ತ ಜಯರತ್ನ ಟ್ರೇಡರ್ಸ್, ವೀರಭದ್ರೇಶ್ವರ ಟ್ರೇಡರ್ನಲ್ಲಿ ಇದ್ದ ಹಣವನ್ನು ಕಳ್ಳರು ಎಗರಿಸಿದ್ದಾರೆ. ಕೂಡಲೇ ಕಳ್ಳತನವಾದ ಬಗ್ಗೆ ಪೊಲೀಸರಿಗೆ ಮಾಲೀಕರು ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಸಿ ಟಿವಿ ದೃಶ್ಯಗಳನ್ನು ಕಲೆಹಾಕಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.

 

 

Author:

...
Sushmitha N

Copy Editor

prajashakthi tv

share
No Reviews